ಶಾಂತತೆಗೆ ಭಂಗ ಸೇರಿದಂತೆ ಕಾನೂನು ಬಾಹಿರ ಚಟುವಟಿಕೆಯಲ್ಲಿ ತೊಡಗಿದ್ದ ಧಾರವಾಡದ 27 ಜನರನ್ನು ಹುಬ್ಬಳ್ಳಿ ಧಾರವಾಡ ಪೊಲೀಸ್ ಆಯುಕ್ತ ಎನ್ ಶಶಿಕುಮಾರ ಗಡಿಪಾರು ಮಾಡಿ ಆದೇಶ ಹೊರಡಿಸಿದ್ದಾರೆ.
ಗಡಿಪಾರಾದ ಧಾರವಾಡದವರು ಯಾರಾರು, ಅವರು ಯಾವ ಏರಿಯಾದವರು ಅನ್ನೋ ಮಾಹಿತಿ ಇಲ್ಲಿದೆ.
ಅಡ್ಡಾ ಸೂಹೆಲ್ ಬಾನದಾರ, ಕಾಜುಲೈನ್ ಕೋಟುರ, ಹಜರತ್ ಅಲಿ ಪಾಡಾ ಮಕಾನದಾರ, ಸತೀಶ್ ಅಲಿಯಾಸ ಸತ್ಯಾ ಗೋಕಾವಿ, ಚೇತನ ಮೇಟಿ, ಇಸದಾರ ಅಲಿಯಾಸ್ ಅಬ್ಬು ಶೇಖ,ಸೋಹೇಲ್ ಖಾನ್ ಹಾಲಭಾವಿ ಇವರೆಲ್ಲ ಧಾರವಾಡ ಶಹರ ಠಾಣೆ ವ್ಯಾಪ್ತಿಯವರು.
ಅಹ್ಮದ ಶಿರಹಟ್ಟಿ, ಉದಯ ಕೆಲಗೇರಿ, ಸುನೀಲ್ ಮಾಳಗಿ ಇವರೆಲ್ಲ ಧಾರವಾಡ ಉಪನಗರ ಠಾಣೆ ವ್ಯಾಪ್ತಿಯವರು.
ಇನ್ನು ಅಷ್ಪಾಕ್ ಅತ್ತಾರ, ವಾಸುದೇವ್ ಕೊಲ್ಲಾಪುರ, ಅರವಿಂದ ಭಜಂತ್ರಿ, ಕಾರ್ತಿಕ ಮದರಿಮಠ, ಅಲ್ಲಾವುದ್ದಿನ ಅಲಿಯಾಸ್ ಡಲ್ಯಾ ನದಾಫ, ಸಿದ್ದಾರ್ಥ ಹೆಗ್ಗಣದೊಡ್ಡಿ, ಆನಂದ ಕೊಪ್ಪದ, ಇವರೆಲ್ಲ ಧಾರವಾಡ ವಿಧ್ಯಾಗಿರಿ ಠಾಣೆ ವ್ಯಾಪ್ತಿಯವರಾಗಿದ್ದಾರೆ.
ಆದರೆ ಇವರೆಗೆಲ್ಲ ಯಾವ ಜಿಲ್ಲೆಗೆ ಹಾಗೂ ಎಷ್ಟು ಅವಧಿಗೆ ಗಡಿಪಾರು ಮಾಡಲಾಗಿದೆ ಅನ್ನೋದು ಇನ್ನಷ್ಟೇ ತಿಳಿದು ಬರಬೇಕಿದೆ.
