ಬಿಜೆಪಿಗೆ ಗುಡ್ ಬೈ ಹೇಳ್ತಾರಾ ಮಾಜಿ ಶಾಸಕ ಪ್ರೀತಮ್ ಗೌಡಾ ? ಇಂತದೊಂದು ಅಚ್ಚರಿಯ ಮಾತುಗಳು ಹಾಸನ ಜಿಲ್ಲೆಯಲ್ಲಿ ಕೇಳಿ ಬರುತ್ತಿದೆ.
ಹಾಸನದ ದೊಡ್ಡ ಗೌಡರ ಕುಟುಂಬದ ಬದ್ದ ರಾಜಕೀಯ ಎದುರಾಳಿ ಪ್ರೀತಮ್ ಗೌಡರ ಆಪ್ತರು, ಪ್ರೀತಮ್ ಗೌಡರಿಗೆ ಕಾಂಗ್ರೇಸ್ ಪಕ್ಷ ಸೇರುವಂತೆ ದುಂಬಾಲು ಬಿದ್ದಿದ್ದಾರೆ ಎನ್ನಲಾಗಿದೆ.
ಹಾಸನದಲ್ಲಿ ಜೆಡಿಎಸ್ ಅಭ್ಯರ್ಥಿ ಎದುರು ಸೋಲು ಅನುಭವಿಸಿರುವ ಪ್ರೀತಮ್ ಗೌಡ ಸಧ್ಯದಲ್ಲಿಯೇ ಬಿಜೆಪಿಗೆ ಗುಡ್ ಬೈ ಹೇಳ್ತಾರೆ ಎನ್ನುವ ಮಾತುಗಳು ಕೇಳಿ ಬರ್ತಿವೆ.
ಜೆಡಿಎಸ್ ಪಕ್ಷದ ಭದ್ರಕೋಟೆಯನ್ನು ಅಲ್ಲಾಡಿಸಲು, ಪ್ರೀತಮ್ ಗೌಡರನ್ನು ಪಕ್ಷಕ್ಕೆ ಆಹ್ವಾನಿಸುವ ಕಸರತ್ತು ತೆರೆಮರಿಯಲ್ಲಿ ನಡೆಸಿದ್ದಾರೆ ಎನ್ನಲಾಗಿದೆ.