ಜನಗಣತಿ ವರದಿ ಬಹಿರಂಗಕ್ಕೆ ವ್ಯಾಪಕ ಟೀಕೆ ವ್ಯಕ್ತವಾಗುತ್ತಿದ್ದರೆ, ಮತ್ತೊಂದೆಡೆ ರಾಜ್ಯದಲ್ಲಿ ಜಾನುವಾರು ಗಣತಿ ನಡೆಯುತ್ತಿದೆ.
ಅಕ್ಟೋಬರ್ 25 ರಿಂದ ಜಾನುವಾರು ಗಣತಿ ಆರಂಭವಾಗಿದ್ದು, ಪಶು ಸಂಗೋಪನಾ ಇಲಾಖೆ ಸಿಬ್ಬಂದಿ ಜಾನಾವಾರು ಗಣತಿಯಲ್ಲಿ ತೊಡಗಿದ್ದಾರೆ.
ಪಶು ಸಂಗೋಪನಾ ಇಲಾಖೆಯ 103 ಸಿಬ್ಬಂದಿ ಧಾರವಾಡ ಜಿಲ್ಲೆಯಲ್ಲಿ ಗಣತಿ ಕಾರ್ಯದಲ್ಲಿ ತೊಡಗಿದ್ದು, ಹುಬ್ಬಳ್ಳಿ ಧಾರವಾಡ ಸೇರಿದಂತೆ, ನವಲಗುಂದ, ಕುಂದಗೋಳ, ಕಲಘಟಗಿ, ಅಳ್ನಾವರ, ಅಣ್ಣಿಗೇರಿ, ಧಾರವಾಡ ತಾಲೂಕಿನಲ್ಲಿನ ಪ್ರತಿ ಗಲ್ಲಿ ಗಲ್ಲಿಗೆ ಹೋಗಿ ಗಣತಿ ಮಾಡುತ್ತಿದ್ದಾರೆ.
ಈ ಜಾನುವಾರು ಗಣತಿ ಕಾರ್ಯ ಫೆಬ್ರವರಿ ವರೆಗೆ ನಡೆಯಲಿದೆ ಎಂದು ಧಾರವಾಡ ಜಿಲ್ಲೆಯ ಪಶು ಸಂಗೋಪನಾ ಇಲಾಖೆಯ ಉಪ ನಿರ್ದೇಶಕ ಸಾಲಿಗೌಡರ ಕರ್ನಾಟಕ ಫೈಲ್ಸ್ ಗೆ ತಿಳಿಸಿದ್ದಾರೆ.
2019 ರಲ್ಲಿ ಧಾರವಾಡ ಜಿಲ್ಲೆಯಲ್ಲಿ ಜಾನುವಾರು ಗಣತಿ ನಡೆದಿತ್ತು. 2 ಲಕ್ಷ 33 ಸಾವಿರ ಎಮ್ಮೆ ಮತ್ತು ಆಕಳುಗಳು, 53 ಸಾವಿರ ಕುರಿ ಮತ್ತು ಆಡು ಹಾಗೂ 13 ಲಕ್ಷ ಕೋಳಿಗಳು ಸೇರಿದಂತೆ 22 ಸಾವಿರ ಸಾಕು ನಾಯಿ ಹಾಗು ಬೀದಿ ನಾಯಿಗಳಿದ್ದವು.