ಮೊಬೈಲ್ ಬಂದ ಮೇಲೆ, ಬಹಳಷ್ಟು ಜನ ದೈಹಿಕವಾಗಿ ದೌರ್ಬಲ್ಯರಾಗುತ್ತಿದ್ದಾರೆ ಎಂದು ವೈದ್ಯಕೀಯ ಸಂಶೋಧನೆಗಳು ಬೆಳಕು ಚೆಲ್ಲಿವೆ.
ಒಂದು ಸಂಶೋಧನೆ ಪ್ರಕಾರ ಮೊಬೈಲ್ ಬಳಕೆ ಮಾಡುವವರು, ದಿನಕ್ಕೆ ಸರಾಸರಿ 5 ಘಂಟೆಗಳಷ್ಟು ಕಾಲ ಮೊಬೈಲ್ ನಲ್ಲಿ ಸಮಯ ಕಳೆಯುತ್ತಾರಂತೆ.
ಶೇಕಡಾ 89 ರಷ್ಟು ಜನ ಇನ್ಸ್ಟಾಗ್ರಾಮ್ ಹಾಗೂ ವಾಟ್ಸಪ್ಪ್ ದಲ್ಲಿ ಸಮಯ ಕಳೆದರೆ, ಶೇಕಡಾ 4 ರಷ್ಟು ಜನ ಇ-ಮೇಲ್ ನಲ್ಲಿ ತೊಡಗಿಕೊಳ್ಳುತ್ತಾರೆ. ಒಂದು ಅಂದಾಜಿನ ಪ್ರಕಾರ ಮನುಷ್ಯನ ಜೀವನದ 20 ವರ್ಷ ಮೊಬೈಲ್ ನಲ್ಲಿಯೇ ಕಳೆದು ಹೋಗುತ್ತದೆ.
ಸಾಮಾಜಿಕ ಜಾಲತಾಣಗಳು, ಮೊಬೈಲ್ ಬಳಕೆದಾರರಿಗೆ ಜ್ಞಾನ ನೀಡುವ ತಾಣವಾಗಿದ್ದರೆ, ಮತ್ತೊಂದೆಡೆ, ಅನಾಹುತ ಸೃಷ್ಟಿಸಿ, ನೆಮ್ಮದಿಯನ್ನು ಹಾಳು ಮಾಡುತ್ತಿವೆ.
ಇವತ್ತು ಜಗತ್ತೇ ಅಂಗೈದಲ್ಲಿದ್ದು, ನಿಯಮಿತ ವ್ಯಾಯಾಮ, ಆಟ, ಓಟ, ಓದು, ನೆಮ್ಮದಿ , ಎಲ್ಲವನ್ನು ಈಗ ಮೊಬೈಲ್ ಕಸಿದುಕೊಂಡಿದೆ.
ಕುತ್ತಿಗೆ ನೋವು, ತಲೆನೋವು, ಕಣ್ಣಿನ ದೃಷ್ಟಿ ಸಮಸ್ಯೆ, ಬೆನ್ನು ನೋವು, ಮಾನಸಿಕ ಅಸಮತೋಲನ ಸೇರಿದಂತೆ ವಿವಿಧ ಕಾಯಿಲೆಗಳು ಮೊಬೈಲ್ ಬಳಕೆದಾರರಲ್ಲಿ ಕಂಡು ಬರುತ್ತಿವೆ.