ಮನೆಯಲ್ಲಿ ತೀವ್ರ ಬಡತನ, ಜೀವನದಲ್ಲಿ ಏನಾದರು ಸಾಧಿಸಬೇಕು ಅನ್ನೋ ಛಲ. ಆಕೆಯ ಸಾಧನೆಗೆ ಬಡತನ ಅಡ್ಡಿಯಾಗಲಿಲ್ಲ. ಕಡೆಗೂ ಆಕೆ ಅಂದುಕೊಂಡಿದ್ದನ್ನು ಸಾಧನೆ ಮಾಡಿದಳು.
ಮಧ್ಯಪ್ರದೇಶದ ರೇವಾ ಎಂಬಲ್ಲಿ ಅಟೋ ಡ್ರೈವರ್ ನ ಮಗಳು ಆಯೇಷಾ ಅನ್ಸಾರಿ, ಇದೀಗ ಜಿಲ್ಲಾಧಿಕಾರಿಯಾಗಿದ್ದಾಳೆ.
ಅಪ್ಪ ಅಟೋ ಡ್ರೈವರ್ ಆಗಿದ್ದರೂ, ಮಗಳು ಆಯೇಷಾ ಅನ್ಸಾರಿಯ ಸಾಧನೆಯ ಹಿಂದೆ ಅಪ್ಪ, ದೊಡ್ಡ ಶಕ್ತಿಯಾಗಿ, ಸ್ಫೂರ್ತಿಯಾಗಿ ಆಯೇಷಾ ಸಾಧನೆ ಮಾಡಲು ಸಾಧ್ಯವಾಗಿದೆ.
ಆಯೇಷಾ ಅನ್ಸಾರಿ, ಮಧ್ಯಪ್ರದೇಶ ಸರ್ಕಾರವು ರಾಜ್ಯದ ವಿವಿಧ ಆಡಳಿತಾತ್ಮಕ ಮತ್ತು ನಾಗರಿಕ ಸೇವೆಗಳ ಹುದ್ದೆಗಳಿಗೆ ಅಭ್ಯರ್ಥಿಗಳನ್ನು ನೇಮಿಸಿಕೊಳ್ಳಲು ನಡೆಸುವ ರಾಜ್ಯ ಮಟ್ಟದ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಸಾಧನೆ ಮಾಡಿದ್ದಾಳೆ.
2020 ರಲ್ಲಿ ಪದವಿ ಪೂರ್ಣಗೊಳಿಸಿದ ಆಯೇಷಾ, ನಾಲ್ಕು ವರ್ಷಗಳಿಂದ ಮಧ್ಯಪ್ರದೇಶ ಲೋಕಸೇವಾ ಆಯೋಗದ ಪರೀಕ್ಷೆಗೆ ತಯಾರಿ ನಡೆಸಿದ್ದಳು. ಇಂದು ಪರೀಕ್ಷಾ ಫಲಿತಾಂಶ ಪ್ರಕಟವಾಗಿದ್ದು, ಆಯೇಷಾ ಉತ್ತಮ ಅಂಕ ಪಡೆದು ಜಿಲ್ಲಾಧಿಕಾರಿ ಹುದ್ದೆಗೆ ಆಯ್ಕೆಯಾಗಿದ್ದಾಳೆ.
