ರಾಜ್ಯದಲ್ಲಿ ಹೆಚ್ಚಾಗಿರುವ ದರೋಡೆ ಪ್ರಕರಣಗಳ ಹಿನ್ನೆಲೆಯಲ್ಲಿ ಹುಬ್ಬಳ್ಳಿ ಧಾರವಾಡ ಪೊಲೀಸ್ ಕಮಿಷನರ್ ಶಶಿಕುಮಾರ ಅವರು ಇಂದು ರೌಡಿ ಪರೇಡ್ ನಡೆಸಿದರು.
ಹುಬ್ಬಳ್ಳಿಯ ಹಳೇ ಸಿ ಆರ್ ಮೈದಾನದಲ್ಲಿ ರೌಡಿ ಪರೇಡ ನಡೆಸಿದ ಪೊಲೀಸ್ ಆಯುಕ್ತ, ಯುವಕನೊಬ್ಬನನ್ನು ತರಾಟೆಗೆ ತೆಗೆದುಕೊಂಡರು.
ಕೈಗೆ ಅಮ್ಮನ ಹೆಸರಲ್ಲಿ ಟ್ಯಾಟೋ ಹಾಕಿಸಿಕೊಂಡಿದ್ದವನನ್ನು ಗಮನಿಸಿದ ಅವರು, ಕೈಯಲ್ಲಿ ಅಮ್ಮನ ಹೆಸರು ಬರೆಸಿಕೊಂಡು, ಹೆಣ್ಮಕ್ಕಳ ಮಾಂಗಲ್ಯ ಕದಿಯುವ ಕೆಲಸ ಮಾಡ್ತಿಯಾ, ನಾಚಿಕೆ ಬರಲ್ವಾ ಎಂದು ಗರಂ ಆದರು.
