ದೇಶದಲ್ಲಿ ಧಾರವಾಡದ ಕೃಷಿ ವಿಶ್ವ ವಿದ್ಯಾಲಯ ದೊಡ್ಡ ಹೆಸರು ಮಾಡಿದೆ. ದೊಡ್ಡ ಹೆಸರು ಮಾಡಿದ ವಿಶ್ವ ವಿದ್ಯಾಲಯದಲ್ಲಿ ಅಷ್ಟೇ ದೊಡ್ಡ ಪ್ರಮಾಣದ ಹಗರಣಗಳು ನಡೆಯುತ್ತಿರುವದು ಬೆಳಕಿಗೆ ಬಂದಿದೆ.
scsp/tsp ಯೋಜನೆಯಡಿ, ದಲಿತ ವಿದ್ಯಾರ್ಥಿಗಳ ವಿದ್ಯಾರ್ಜನೆಗೆ ಬಳಕೆಯಾಗಬೇಕಿದ್ದ 33 ಲಕ್ಷ ರೂಪಾಯಿ ಹಣವನ್ನು ದುರ್ಬಳಕೆ ಮಾಡಿಕೊಂಡಿರುವದು ಬೆಳಕಿಗೆ ಬಂದಿದೆ.
ದಲಿತ ವಿದ್ಯಾರ್ಥಿಗಳಿಗೆ ಕಂಪ್ಯೂಟರ್ ಶಿಕ್ಷಣ ನೀಡಲು ಕೃಷಿ ವಿ ವಿ ಕಿಯೋನಿಕ್ಸ್ ಜೊತೆ ಒಪ್ಪಂದ ಮಾಡಿಕೊಂಡಿತ್ತು. ಇನ್ನೇನು ತರಗತಿಗಳು ಆರಂಭವಾಗಬೇಕಿತ್ತು.
ಫಲಾನುಭವಿ ವಿಧ್ಯಾರ್ಥಿಗಳನ್ನು ಆಯ್ಕೆ ಮಾಡಿ ತರಬೇತಿ ಕೊಟ್ಟ ಬಳಿಕ ಕಿಯೋನಿಕ್ಸ್ ಗೆ ಹಣ ಪಾವತಿ ಮಾಡಬೇಕಿತ್ತು. ಆದರೆ ಕೃಷಿ ವಿ ವಿ ಕುಲಪತಿ ಪಾಟೀಲ, ಇದಾವದನ್ನು ಮಾಡದೆ, ದಲಿತ ವಿದ್ಯಾರ್ಥಿಗಳಿಗೆ ತರಬೇತಿ ನೀಡದಿದ್ದರು, ಕಿಯೋನಿಕ್ಸ್ ಗೆ 33 ಲಕ್ಷ ಹಣ ಬಿಡುಗಡೆ ಮಾಡಿದ್ದು, ದಲಿತ ವಿದ್ಯಾರ್ಥಿಗಳಿಗೆ ವಂಚನೆ ಮಾಡಿದಂತಾಗಿದೆ.