ಮಹಾರಾಷ್ಟ್ರದ ಜಲಗಾಂವ್‌ನಲ್ಲಿ ಭಾರಿ ರೈಲು ದುರಂತ ಸಂಭವಿಸಿದೆ.
ಪುಷ್ಪಕ್ ಎಕ್ಸ್‌ಪ್ರೆಸ್‌ನ ಕನಿಷ್ಠ 20 ರೈಲು ಪ್ರಯಾಣಿಕರು ಕರ್ನಾಟಕ ಎಕ್ಸ್‌ಪ್ರೆಸ್‌ಗೆ ಸಿಲುಕಿ ಸಾವನ್ನಪ್ಪಿದ್ದಾರೆ.
ಇನ್ನೂ ಹಲವು ಪ್ರಯಾಣಿಕರು ತೀವ್ರವಾಗಿ ಗಾಯಗೊಂಡಿದ್ದಾರೆ ಎನ್ನಲಾಗಿದೆ. ತಾವಿದ್ದ ರೈಲಿಗೆ ಬೆಂಕಿ ತಗುಲಿದೆ ಎಂಬ ಸುದ್ದಿ ತಿಳಿದ ಪ್ರಯಾಣಿಕರು ಒಬ್ಬೊಬ್ಬರಾಗಿ ರೈಲ್ವೇಯಿಂದ ಜಿಗಿದಿದ್ದು, ಪಕ್ಕ ಹೊರಟಿದ್ದ ರೈಲಿನಲ್ಲಿ ಸಿಕ್ಕು ಮೃತಪಟ್ಟಿದ್ದಾರೆ.