ಮಹತ್ವದ ಬೆಳವಣಿಗೆಯಲ್ಲಿ ಮಣಿಪುರದಲ್ಲಿ ಬಿಜೆಪಿ ಸರ್ಕಾರಕ್ಕೆ ಕೊಟ್ಟಿದ್ದ ಬೆಂಬಲವನ್ನು ನಿತೀಶ್ ಕುಮಾರ ಹಿಂದಕ್ಕೆ ಪಡೆದಿದ್ದಾರೆ.
60 ಸದಸ್ಯ ಬಲದ ಮಣಿಪುರ ವಿಧಾನಸಭೆಯಲ್ಲಿ ಬಿಜೆಪಿ ಅಧಿಕಾರದಲ್ಲಿದೆ. ಬಿಜೆಪಿ 37 ಶಾಸಕರ ಬಲದೊಂದಿಗೆ ಸಂಪೂರ್ಣ ಬಹುಮತ ಹೊಂದಿದ್ದರು. ಜೆಡಿಯು ಬಿಜೆಪಿ ಸರ್ಕಾರಕ್ಕೆ ಬೆಂಬಲ ನೀಡಿತ್ತು.
ಜೆಡಿಯುನಿಂದ ಆಯ್ಕೆಯಾಗಿದ್ದ 6 ಶಾಸಕರ ಪೈಕಿ 5 ಶಾಸಕರು ಬಿಜೆಪಿ ಸೇರಿದ ಮೇಲೆ ಜೆಡಿಯು ನಲ್ಲಿ ಈಗ ಕೇವಲ ಓರ್ವ ಶಾಸಕ ಮಾತ್ರ ಉಳಿದಂತಾಗಿದೆ.
ಜೆಡಿಯುನ ಮಣಿಪುರ ಘಟಕದ ಅಧ್ಯಕ್ಷ ಕ್ಷೇತ್ರಿಮಯುಮ್ ಬಿರೇನ್ ಸಿಂಗ್ ಅವರು ರಾಜ್ಯಪಾಲ ಅಜಯ್ ಕುಮಾರ್ ಭಲ್ಲಾ ಅವರಿಗೆ ಪತ್ರ ಬರೆದು ಬೆಂಬಲ ಹಿಂತೆಗೆದುಕೊಳ್ಳುವುದನ್ನು ಖಚಿತಪಡಿಸಿದ್ದಾರೆ.
ಉಳಿದಿರುವ ಜೆಡಿಯು ಶಾಸಕ ಎಂ ಡಿ ಅಬ್ದುಲ್ ನಾಸಿರ್ ಇದೀಗ ವಿರೋಧ ಪಕ್ಷದ ಆಸನದಲ್ಲಿ ಕುಳಿತುಕೊಳ್ಳಲಿದ್ದಾರೆ.