ಬಳ್ಳಾರಿ ರಾಜಕೀಯ, ಒಂದು ಕಾಲಕ್ಕೆ ರಾಜ್ಯದ ರಾಜಕಾರಣವನ್ನು ತನ್ನತ್ತ ಸೆಳೆದಿತ್ತು. ಜನಾರ್ಧನ ರೆಡ್ಡಿ ಮತ್ತು ಶ್ರೀರಾಮುಲು ಜೋಡಿ, ಬಳ್ಳಾರಿಯನ್ನು ಬಿಜೆಪಿಯ ಭದ್ರಕೋಟೆಯನ್ನಾಗಿ ಮಾಡಿದ್ದರು.
ಆದರೆ ಈಗ ಬಳ್ಳಾರಿಯಲ್ಲಿ ರಾಮುಲು ಹಾಗೂ ರೆಡ್ಡಿ ನಡುವಿನ ರಾಜಕೀಯ, ಜಿದ್ದಾಜಿದ್ದಿಗೆ ಕಾರಣವಾಗಿದೆ. ಗಣಿ ನಾಡಿನಲ್ಲಿ ಇಬ್ಬರು ನಾಯಕರು ದೂಳು ಮೆತ್ತುಕೊಂಡಿದ್ದಾರೆ. ಪರಸ್ಪರ ಕೆಸರೆರಚಾಟದಲ್ಲಿ ತೊಡಗಿದ್ದಾರೆ.
ರೆಡ್ಡಿ ಆಡಿದ ಅದೊಂದು ಮಾತು ಶ್ರೀರಾಮುಲುರನ್ನು ರೊಚ್ಚಿಗೆಬ್ಬಿಸಿದೆ. ರೆಡ್ಡಿ ರಾಂಗ್ ಆದರೆ, ರಾಮುಲು ರೊಚ್ಚಿಗೆದ್ದಿದ್ದಾರೆ.
ರೆಡ್ಡಿ ಏನಂದಿರಿಗಿನಾ ?
ಬಿಜೆಪಿ ಕೋರ್ ಕಮೀಟಿ ಸಭೆಯಲ್ಲಿ ಸಂಡೂರ ಕ್ಷೇತ್ರದ ಸೋಲಿನ ವಿಚಾರ ಪ್ರಸ್ತಾಪವಾಗಿದ್ದೆ ತಡ, ರಾಮುಲು ಕುದ್ದು ಹೋಗಿದ್ದರು. ರಾಜ್ಯ ಉಸ್ತುವಾರಿ ಆಡಿದ ಮಾತಿನ ಹಿಂದೆ, ಜನಾರ್ಧನ ರೆಡ್ಡಿ ಕುತಂತ್ರ ಕೆಲಸ ಮಾಡಿದೆ ಎಂದು ರಾಮುಲು ಕಿಡಿ ಕಾರಿದ್ದರು.
ಅವತ್ತು ನಾನಿಲ್ಲದಿದ್ದಿದ್ದರೆ, ರಾಮುಲು ಕೊಲೆಗಡುಕ ಹಣೆಪಟ್ಟಿ ಕಟ್ಟಿಕೊಳ್ಳುತ್ತಿದ್ದ ಎಂದು ಜನಾರ್ಧನ ರೆಡ್ಡಿ ಹೇಳುತ್ತಿದ್ದಂತೆ, ಇಬ್ಬರ ಮಧ್ಯೆ ಇದ್ದ 40 ವರ್ಷದ ಸಂಬಂಧ ಹಳಸಿ ಹೋಗಿದೆ.
ರೆಡ್ಡಿ ಆಡಿದ ಮಾತಿಗೆ ತಿರುಗೇಟು ನೀಡಿರುವ ರಾಮುಲು, ಜನಾರ್ಧನ ರೆಡ್ಡಿ ಮಾಡಿರುವ ಎಲ್ಲಾ ಕುಕೃತ್ಯಗಳನ್ನು ಧಾಖಲೆ ಸಮೇತ ಬಿಡುಗಡೆ ಮಾಡ್ತೀನಿ ಎಂದು ಹೇಳಿದ್ದಾರೆ.
ಬಳ್ಳಾರಿ ಬಿಜೆಪಿಯಲ್ಲಿಗ, ನಾನಾ ,,, ನೀನಾ,,, ಅನ್ನೋ ಪರಿಸ್ಥಿತಿ ಸೃಷ್ಟಿಯಾಗಿದೆ.
ವರದಿ – ಮುಸ್ತಫಾ ಕುನ್ನಿಭಾವಿ