ಸ್ಪೋಟಕ ಬ್ಯಾಟಿಂಗ್ ಶೈಲಿಗೆ ಹೆಸರಾಗಿದ್ದ ಕ್ರಿಕೆಟಿಗ ವೀರೇಂದ್ರ ಸೆಹ್ವಾಗ್ ದಾಂಪತ್ಯದಲ್ಲಿ ಬಿರುಕು ಕಾಣಿಸಿಕೊಂಡಿದೆ
ಕ್ರಿಕೆಟಿಗ ವೀರೇಂದ್ರ ಸೆಹ್ವಾಗ್ ಮತ್ತು ಆರತಿ ಅಹ್ಲಾವತ್ ರ 20 ವರ್ಷಗಳ ದಾಂಪತ್ಯದ ನಂತರ ಇದೀಗ ಬೇರ್ಪಟ್ಟಿದ್ದಾರೆ.
ಇವರಿಬ್ಬರ ಮದುವೆ 2004 ರಲ್ಲಿ ಅದ್ದೂರಿಯಾಗಿ ನಡೆದಿತ್ತು. ಹಿರಿಯ ರಾಜಕಾರಣಿಯಾಗಿದ್ದ ಅರುಣ ಜೇಟ್ಲಿ ಮನೆಯಲ್ಲಿ ಇವರ ವಿವಾಹ ನಡೆದಿತ್ತು.
ವೀರೇಂದ್ರ ದಂಪತಿಗೆ ಇಬ್ಬರು ಮಕ್ಕಳಿದ್ದಾರೆ. ಆರ್ಯ ವೀರ್ ಹಾಗೂ ವೇದಾಂತ ಎಂಬ ಇಬ್ಬರು ಮಕ್ಕಳಿದ್ದಾರೆ.
ಭಾರತೀಯ ಕ್ರಿಕೇಟ್ ತಂಡದಲ್ಲಿ ಹೆಸರು ಮಾಡಿದ ಆಟಗಾರರ ಬದುಕಲ್ಲಿ, ವಿಚ್ಚೇದನದಂತಹ ಸುದ್ದಿಗಳು ಹೆಚ್ಚು ಹೆಚ್ಚಾಗಿ ಕೇಳಿ ಬರುತ್ತಿವೆ.
ಈಗಾಗಲೇ, ದಿನೇಶ್ ಕಾರ್ತಿಕ್ ನಂತರ ಶಿಖರ್ ಧವನ್, ಹಾರ್ದಿಕ್ ಪಾಂಡ್ಯ ನಂತರ ಯುಜ್ವೇಂದ್ರ ಚಹಾಲ್ ಮತ್ತು ಈಗ ವೀರೇಂದ್ರ ಸೆಹ್ವಾಗ್. ಇವರೆಲ್ಲ ತಮ್ಮ ಇಚ್ಛೆಯಂತೆ ಮದುವೆಯಾಗುತ್ತಾರೆ ಆದರೆ ಪತ್ನಿಯರ ಇಚ್ಛೆಯಂತೆ ವಿಚ್ಛೇದನ ನಡೆಯುತ್ತದೆಯಾ ಎಂಬ ಪ್ರಶ್ನೆ ಕೇಳಿ ಬರುತ್ತಿದೆ.
