Download Our App

Follow us

Home » ಕರ್ನಾಟಕ » ಪದ್ಮಶ್ರೀ ಪುರಸ್ಕೃತ ವೆಂಕಪ್ಪನವರನ್ನು ಸನ್ಮಾನಿಸಿದ ಕೇಂದ್ರ ಸಚಿವ ಜೋಶಿ

ಪದ್ಮಶ್ರೀ ಪುರಸ್ಕೃತ ವೆಂಕಪ್ಪನವರನ್ನು ಸನ್ಮಾನಿಸಿದ ಕೇಂದ್ರ ಸಚಿವ ಜೋಶಿ

ಕೇಂದ್ರ ಸಚಿವ ಪ್ರಲ್ಲಾದ ಜೋಶಿ ಪದ್ಮಶ್ರೀ ಪುರಸ್ಕೃತ ಬಾಗಲಕೋಟೆಯ ವೆಂಕಪ್ಪ ಸುಗತೇಕರ ಅವರಿಗೆ ಹೃದಯ ಸ್ಪರ್ಶಿ ಸನ್ಮಾನ ಮಾಡಿದರು.

ದೆಹಲಿಯಲ್ಲಿ ವೆಂಕಪ್ಪನವರನ್ನು ಭೇಟಿ ಮಾಡಿದ ಪ್ರಲ್ಲಾದ ಜೋಶಿಯವರು, ಶಾಲು ಮಾಲೆ ಹಾಕಿ, ಕಡೆಗೆ ವೆಂಕಪ್ಪನವರ ಕಾಲಿಗೆ ನಮಸ್ಕರಿಸಿ, ಭಾರತೀಯ ಸಂಸ್ಕೃತಿ ಮೆರೆದರು.

ಹಿರಿಯರಿಗೆ ಹೇಗೆ ಗೌರವಿಸಬೇಕು ಎಂದು ಸಂದೇಶ ಕೊಟ್ಟ, ಪ್ರಲ್ಲಾದ ಜೋಶಿಯವರು, ವೆಂಕಪ್ಪನವರು ಗೊಂದಳಿ ಹಾಡಿನ ಮೂಲಕ ಸುದೀರ್ಘ ಕಲಾಸೇವೆ ಮಾಡಿಕೊಂಡು ಬಂದಿದ್ದು, 71 ವರ್ಷಗಳಿಂದ ಗೊಂದಳಿ ಪದಗಳನ್ನು ಹಾಡುವ ಮೂಲಕ, ಜನಪದ ವಿಶ್ವವಿದ್ಯಾಲಯದಿಂದ ಗೌರವ ಡಾಕ್ಟರೇಟ್ ಪಡೆದಿದ್ದಾರೆ ಎಂದರು.

ಅತ್ಯಂತ ಬಡ ಕುಟುಂಬದಲ್ಲಿ ಜನಿಸಿ ಶಾಲೆಗೆ ಹೋಗಿ ಓದು ಬರಹ ಕಲಿಯುವ ಅವಕಾಶ ಸಿಗದಿದ್ದರೂ ಇಂದು ಸಹಸ್ರಾರು ಹಾಡುಗಳನ್ನು ಜ್ಞಾಪಕ ಶಕ್ತಿಯಿಂದಲೇ, ಬಾಯಿಪಾಠದ ಮೂಲಕವೇ ಹಾಡಿ ಅಪಾರ ಜನಪ್ರಿಯತೆ ಹೊಂದಿದ್ದಾರೆ 

ಅವರಿಗೆ ಇಂದು ಆತ್ಮೀಯತೆಯಿಂದ ಅಭಿನಂದಿಸಿ ಪುಟ್ಟ ಗೌರವ ನಮನಗಳನ್ನು ಸಲ್ಲಿಸುವ ಸದಾವಕಾಶ ಒದಗಿ ಬಂದಿದ್ದು ನನಗೆ ಅತ್ಯಂತ ಸಂತೋಷ ತಂದಿದೆ ಎಂದು ಜೋಶಿಯವರು ಎಕ್ಸ್ ನಲ್ಲಿ ಬರೆದುಕೊಂಡಿದ್ದಾರೆ.

Karnataka Files
Author: Karnataka Files

Leave a Comment

RELATED LATEST NEWS

Top Headlines

ಕಳ್ಳತನವಾದ ಬಂಗಾರ ಪತ್ತೆ ಹಚ್ಚಿ ಮಹಿಳೆಗೆ ಹಸ್ತಾಂತರಿಸಿದ ಇನ್ಸಪೆಕ್ಟರ್ ದಯಾನಂದ

ಧಾರವಾಡದ ಹೊಸ ಬಸ್ ನಿಲ್ದಾಣ ಬಳಿ ಬಸ್ ಹತ್ತುವ ವೇಳೆ ಕಳ್ಳತನಾಗಿದ್ದ ವ್ಯಾನಿಟಿ ಬ್ಯಾಗನ್ನು ಪತ್ತೆ ಮಾಡಿ ಮರಳಿ ಮಹಿಳೆಗೆ ಒಪ್ಪಿಸಿದ ಘಟನೆ ಧಾರವಾಡದಲ್ಲಿ ನಡೆದಿದೆ.  30

Live Cricket

error: Content is protected !!