ಉತ್ತರ ಪ್ರದೇಶದ ಪ್ರಯಾಗ್ ರಾಜ್ ನಲ್ಲಿ ನಡೆಯುತ್ತಿರುವ ಮಹಾ ಕುಂಭ ಮೇಳದಲ್ಲಿ ಕರ್ನಾಟಕ ವಿಧಾನಸಭೆಯ ಸಭಾಪತಿ ಯು ಟಿ ಖಾದರ ಭಾಗವಹಿಸಿದ್ದಾರೆ.
ಸ್ನೇಹಿತರೊಂದಿಗೆ ಪ್ರಯಾಗರಾಜಗೆ ಹೋಗಿದ್ದ ಯು ಟಿ ಖಾದರ್ ಅವರು, ಬೇರೆ ಬೇರೆ ಆಖಡಾದ ನಾಗಾ ಸಾಧುಗಳ ದರ್ಶನ ಪಡೆದಿದ್ದಾರೆ.
ಜುನಾ ಅಖಾಡಾದ ನಾಗಾ ಸಾಧುಗಳ ಜೊತೆ ಯು ಟಿ ಖಾದರ್ ಫೋಟೋ ತೆಗೆಸಿಕೊಂಡು, ಫೇಸ್ ಬುಕ್ ನಲ್ಲಿನ ತಮ್ಮ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.
ಕುಂಭಮೇಳದ ಜೊತೆ ಅಲಹಾಬಾದನಲ್ಲಿ ಇರುವ ದರ್ಗಾಕ್ಕೆ ಭೇಟಿ ನೀಡಿರುವ ಯು ಟಿ ಖಾದರ್ ಪ್ರಾರ್ಥನೆ ಸಲ್ಲಿಸಿದ್ದಾರೆ.