Download Our App

Follow us

Home » ಕರ್ನಾಟಕ » ಕುಂಭಮೇಳದಲ್ಲಿ ಮಿಂಚಿದ್ದ ಮೊನಾಲಿಸಾಗೆ ಕೈ ಬೀಸಿ ಕರೆದ ಬಾಲಿವುಡ್. ಮೊದಲ ಸಿನೆಮಾಗೆ ಸಹಿ

ಕುಂಭಮೇಳದಲ್ಲಿ ಮಿಂಚಿದ್ದ ಮೊನಾಲಿಸಾಗೆ ಕೈ ಬೀಸಿ ಕರೆದ ಬಾಲಿವುಡ್. ಮೊದಲ ಸಿನೆಮಾಗೆ ಸಹಿ

ಬಾಲಿವುಡ್ ನ ಖ್ಯಾತ ನಿರ್ದೇಶಕ ಸನೋಜ ಮಿಶ್ರಾ, ಕುಂಭಮೇಳದಲ್ಲಿ ಮಿಂಚಿದ್ದ ಮೊನಾಲಿಸಾಗೆ ತಮ್ಮ ಸಿನೆಮಾದಲ್ಲಿ ನಟಿಸಲು ಅವಕಾಶ ನೀಡಿದ್ದಾರೆ. 

ಈ ಹಿಂದೆ ದಿ ಡೈರಿ ಆಫ್ ವೆಸ್ಟ್ ಬೆಂಗಾಲ್ ಮತ್ತು ಗಾಂಧಿಗಿರಿಯಂತಹ ಚಲನಚಿತ್ರಗಳನ್ನು ನಿರ್ದೇಶಿಸಿರುವ ಮಿಶ್ರಾ, “ದಿ ಡೈರಿ ಆಫ್ ಮಣಿಪುರ” ಚಿತ್ರ ನಿರ್ಮಾಣ ಮಾಡುತ್ತಿದ್ದಾರೆ. “ದಿ ಡೈರಿ ಆಫ್ ಮಣಿಪುರ” ದಲ್ಲಿ, ಮೊನಾಲಿಸಾ ಸೇನಾ ಅಧಿಕಾರಿಯ ಮಗಳ ಪಾತ್ರವನ್ನು ನಿರ್ವಹಿಸಲಿದ್ದಾರೆ.

ಈ ಚಿತ್ರದಲ್ಲಿ ಹಿರಿಯ ನಟ ಅನುಪಮ್ ಖೇರ್ ಸೇನಾಧಿಕಾರಿಯಾಗಿ ನಟಿಸಿದ್ದಾರೆ, ದೀಪಕ್ ತಿಜೋರಿ, ಮುಖೇಶ್ ತಿವಾರಿ ಮತ್ತು ಅಮಿತ್ ರಾವ್ ರಂತಹ ನಟರು ಸಹ ಚಿತ್ರದಲ್ಲಿದ್ದಾರೆ. 

“ದಿ ಡೈರಿ ಆಫ್ ಮಣಿಪುರ” 20 ಕೋಟಿ ರೂಪಾಯಿಗಳ ನಿರ್ಮಾಣ ಬಜೆಟ್ ಹೊಂದಿದೆ. ಸಧ್ಯ ಲಂಡನ್ ನಲ್ಲಿ ಚಿತ್ರದ ಚಿತ್ರೀಕರಣ ನಡೆಯುತ್ತಿದೆ.

ಖ್ಯಾತ ಚಲನಚಿತ್ರ ನಿರ್ದೇಶಕ ಸನೋಜ್ ಮಿಶ್ರಾ ಅವರು ಮಧ್ಯಪ್ರದೇಶದ ಖಾರ್ಗೋನ್ ಜಿಲ್ಲೆಯ ಮಹೇಶ್ವರದಲ್ಲಿರುವ ಮೊನಾಲಿಸಾ ಅವರ ಮನೆಗೆ ಖುದ್ದಾಗಿ ಭೇಟಿ ನೀಡಿ, ತಮ್ಮ ಚಿತ್ರದಲ್ಲಿ ನಟಿಸಲು ಅವಕಾಶ ನೀಡಿದ್ದಾರೆ. 

ಹದಿನೇಳು ವರ್ಷದ ಮೊನಾಲಿಸಾ ಪ್ರಯಾಗ್ರಾಜ್ ಮಹಾಕುಂಭದ ಸಮಯದಲ್ಲಿ ಖ್ಯಾತಿಯನ್ನು ಗಳಿಸಿದ್ದಳು. ಅಲ್ಲಿ ಅವಳು ತನ್ನ ಕುಟುಂಬದೊಂದಿಗೆ ಮುತ್ತು ಮತ್ತು ರುದ್ರಾಕ್ಷ ಮಾಲೆಗಳನ್ನು ಮಾರಾಟ ಮಾಡಲು ಹೋದಾಗ ಕುಂಭಮೇಳದಲ್ಲಿ ಎಲ್ಲರ ಗಮನ ಸೆಳೆದಿದ್ದಳು. 

ಆಕೆಯ ನೈಸರ್ಗಿಕ ಸೌಂದರ್ಯ ಮತ್ತು ಮಂತ್ರಮುಗ್ಧಗೊಳಿಸುವ ಕಣ್ಣುಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. 

ಮೊನಾಲಿಸಾ ಭೋಸ್ಲೆ ಅವರು ದಿ ಡೈರಿ ಆಫ್ ಮಣಿಪುರ ಚಿತ್ರದಲ್ಲಿ ತಮ್ಮ ಮೊದಲ ನಟನೆಯನ್ನು ಮಾಡಲು ಸಿದ್ಧರಾಗಿದ್ದು, ಮುಂದಿನ ತಿಂಗಳು ಮೊನಾಲಿಸಾ ಮುಂಬೈಗೆ ಹೋಗಲಿದ್ದು, ಅಲ್ಲಿ ಆಕೆಗೆ ಮೂರು ತಿಂಗಳ ಕಾಲ ತರಬೇತಿ ನೀಡಿ, ನಟನೆಗೆ ಸಿದ್ದ ಮಾಡುವದಾಗಿ ಸನೋಜ್ ಶರ್ಮಾ ಹೇಳಿದ್ದಾರೆ.

Karnataka Files
Author: Karnataka Files

Leave a Comment

RELATED LATEST NEWS

error: Content is protected !!