ಹಾನಗಲ್ ತಾಲೂಕಿನ ಆಡೂರು ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ನರ್ಸ್ ಒಬ್ಬರು ಎಡವಟ್ಟು ಮಾಡಿಕೊಂಡಿದ್ದಾರೆ.
ಜನವರಿ 14 ರಂದು 7 ವರ್ಷದ ಬಾಲಕ ಅಣ್ಣಪ್ಪ ಹೊಸಮನಿ ಎಂಬ ಬಾಲಕನ ಕೆನ್ನೆಗೆ ಗಾಯವಾಗಿತ್ತು. ಗಾಯವಾದ ಪರಿಣಾಮ ಕೆನ್ನೆಯಿಂದ ರಕ್ತ ಬರುತ್ತಿತ್ತು.
ಕೂಡಲೇ ಆತನು ಅಣ್ಣಪ್ಪನನ್ನು ಪಕ್ಕದಲ್ಲಿಯೇ ಇದ್ದ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕರೆದುಕೊಂಡು ಹೋಗಿದ್ದಾರೆ. ಅಲ್ಲಿನ ನರ್ಸ್ ಒಬ್ಬರು, ಬಾಲಕನ ಕೆನ್ನೆಗೆ ಆದ ಗಾಯಕ್ಕೆ ಹೊಲಿಗೆ ಹಾಕುವುದನ್ನು ಬಿಟ್ಟು ಫೆವಿಕ್ವಿಕ್ ಅಂಟಿಸಿ ಮನೆಗೆ ಕಳಿಸಿದ್ದಾರೆ.
ಜ್ಯೋತಿ ಎಂಬ ನರ್ಸ್ ಇಂತಹ ಎಡವಟ್ಟು ಮಾಡಿಕೊಂಡಿದ್ದಾರೆ. ಫೆವಿಕ್ವೀಕ್ ಯಾಕೆ ಹಚ್ಚಿದಿರಿ ಎಂದು ಕೇಳಲು ಹೋದ ಪಾಲಕರಿಗೆ, ನರ್ಸ್ ಎಷ್ಟು ಗೊತ್ತೋ ಅಷ್ಟು ಮಾಡಿದ್ದೇನೆ.
ನರ್ಸ್ ಮಾಡಿದ ಎಡವಟ್ಟು ಗಮನಕ್ಕೆ ಬರುತ್ತಿದ್ದಂತೆ ಹಾವೇರಿ ಜಿಲ್ಲೆಯ ಡಿ ಎಚ್ ಓ ರಾಜೇಶ ಸುರಗಿಹಳ್ಳಿ, ಕ್ರಮ ಜರುಗಿಸುವದಾಗಿ ಹೇಳಿದ್ದಾರೆ.
ಸಾಮಾನ್ಯವಾಗಿ ಹಳ್ಳಿಯ ಜನ, ಕೆಮ್ಮು, ನೆಗಡಿ, ಭೇದಿ ಅಂತ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಹೋಗಿ ಚಿಕಿತ್ಸೆ ಪಡೆಯುತ್ತಾರೆ. ಕೆನ್ನೆಯ ಮೇಲೆ ಹಾಕಿದ ಫೆವಿಕ್ವೀಕ್ ಬೇರೆ ಕಡೆಗೆ ಬಳಕೆಯಾಗುತ್ತಿರುವಂತೆ ಆರೋಗ್ಯ ಅಧಿಕಾರಿಗಳು ಎಚ್ಚರಿಕೆ ವಹಿಸಬೇಕಾಗಿದೆ.