ಧಾರವಾಡದ ಕಲಕೇರಿ ಗ್ರಾಮದ ಹತ್ತಿರ ನಡೆದ ಅಪಘಾತದಲ್ಲಿ ಧಾರವಾಡದ ಹೊಸಯಲ್ಲಾಪುರ ನಿವಾಸಿ ಶಾಂತವ್ವ ಎಂಬುವವರು ಸಾವನ್ನಪ್ಪಿದ್ದಾರೆ.
ಧಾರವಾಡದಿಂದ ಕಲಕೇರಿ ಗ್ರಾಮಕ್ಕೆ ಹೊರಟಿದ್ದ ಕ್ರೂಸರ್ ಅಪಘಾತಕ್ಕಿಡಾಗಿದ್ದು, 14 ಜನರು ಗಾಯಗೊಂಡಿದ್ದರು.
ತೀವ್ರ ಗಾಯಗೊಂಡಿದ್ದ ಶಾಂತವ್ವ ಎಂಬುವವರನ್ನು ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ಧಾಖಲಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೆ ಶಾಂತವ್ವ ಎಂಬ ಮಹಿಳೆ ಸಾವನ್ನಪ್ಪಿರುವ ಸುದ್ದಿ ಬಂದಿದೆ.
