ಗದಗ ಬೆಟಗೇರಿಯಲ್ಲಿ ಬಡ್ಡಿ ದಂದೆ ನಡೆಸುತ್ತಿದ್ದ ಯಲ್ಲಪ್ಪ ಮಿಸ್ಕಿನ್ ಮನೆಯಲ್ಲಿ ಭಾರಿ ಪ್ರಮಾಣದ ನಗದು ಹಣ, ಬಂಗಾರದ ಒಡವೆ, ಬಾಂಡ್ ಪೇಪರ್, ಬ್ಯಾಂಕ್ ಪಾಸ್ ಬುಕ್ ಹಾಗೂ ಎ ಟಿ ಎಮ್ ಕಾರ್ಡಗಳು ಪೊಲೀಸರ ದಾಳಿಯಲ್ಲಿ ಪತ್ತೆಯಾಗಿವೆ.
ಗದಗ ಜಿಲ್ಲಾ ಪೊಲೀಸರು ಬಡ್ಡಿ ದಂದೆ ನಡೆಸುತ್ತಿದ್ದ ಯಲ್ಲಪ್ಪ ಮಿಸ್ಕಿನ್ ಗೆ ಸೇರಿದ 12 ಸ್ಥಳಗಳಲ್ಲಿ ದಾಳಿ ಮಾಡಿದ್ದಾರೆ.
ದಾಳಿ ವೇಳೆ ಬಡ್ಡಿ ಯಲ್ಲಪ್ಪನ ಮನೆಯಲ್ಲಿ 4 ಕೋಟಿ 90 ಲಕ್ಷ ನಗದು ಹಣ ಪತ್ತೆಯಾಗಿದೆ.
ಇದಲ್ಲದೆ 992 ಗ್ರಾಮ ಬಂಗಾರ, ಸಾಲ ಪಡೆದವರ 650 ಆಸ್ತಿಗಳ ಬಾಂಡ್, 4 ಎ ಟಿ ಎಮ್ ಕಾರ್ಡ್ ಹಾಗೂ 9 ಬ್ಯಾಂಕ್ ಪಾಸ್ ಬುಕ್ ಗಳು ಪೊಲೀಸ್ ದಾಳಿ ವೇಳೆ ಪತ್ತೆಯಾಗಿವೆ ಎನ್ನಲಾಗಿದೆ.
ವಿವಿಧ ಕಂಪನಿಗಳ 65 ಲೀಟರ್ ಹೈಟೆಕ್ ಮದ್ಯ ಸಹ ಪತ್ತೆಯಾಗಿದೆ ಎಂದು ಗದಗ ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಬಿ ಎಸ್ ನೇಮಗೌಡ ಮಾಹಿತಿ ನೀಡಿದ್ದಾರೆ.
![Karnataka Files](https://secure.gravatar.com/avatar/3c8a792dfb280b36a94603273157ff83?s=96&r=g&d=https://karnatakafiles.com/wp-content/plugins/userswp/assets/images/no_profile.png)