ಧಾರವಾಡದ ಮಾಧ್ಯಮ ಕ್ಷೇತ್ರದಲ್ಲಿ ಸುಧೀರ್ಘ ವರ್ಷಗಳ ಕಾಲ ಛಾಯಾಗ್ರಾಹಕರಾಗಿ ಸೇವೆ ಸಲ್ಲಿಸಿದ್ದ ರಾಮಚಂದ್ರ ಕುಲಕರ್ಣಿಯವರು ರಾತ್ರಿ 2-30 ರ ಸುಮಾರಿಗೆ ಕೊನೆಯುಸಿರೆಳೆದರು.
ಹುಬ್ಬಳ್ಳಿ ಧಾರವಾಡ, ಗದಗ ಬೆಳಗಾವಿ ಜಿಲ್ಲೆ ಸೇರಿದಂತೆ ಅನೇಕ ಜಿಲ್ಲೆಗಳಲ್ಲಿ ಮಾಧ್ಯಮ ಸ್ನೇಹಿತ ಬಳಗ ಹೊಂದಿದ್ದ ರಾಮಚಂದ್ರ ಕುಲಕರ್ಣಿ ಅವರನ್ನು ಎಲ್ಲರು ಆರ್ ಕೆ ಎಂದೇ ಪ್ರೀತಿಯಿಂದ ಕರೆಯುತ್ತಿದ್ದರು.
ಧಾರವಾಡದ ಪ್ರತಿ ಹೋರಾಟದಲ್ಲಿ ಭಾಗವಹಿಸುವ ಮೂಲಕ ಅಪಾರ ಸಂಖ್ಯೆಯಲ್ಲಿ ಜನರ ಪ್ರೀತಿ ಗಳಿಸಿದ್ದ ಆರ್ ಕೆ ಇಂದು ತಮ್ಮ ಹುಟ್ಟುಹಬ್ಬ ಆಚರಿಸಿಕೊಳ್ಳಬೇಕಿತ್ತು.
ಆರ್ ಕೆ ಯವರ ಅಂತ್ಯಸಂಸ್ಕಾರ ಹೊಸ ಯಲ್ಲಾಪುರದ ಸ್ಮಶಾನದಲ್ಲಿ ಇಂದು ಮಧ್ಯಾಹ್ನ 12 ಘಂಟೆಗೆ ನಡೆಯಲಿದೆ ಎಂದು ಅವರ ಕುಟುಂಬದವರು ತಿಳಿಸಿದ್ದಾರೆ.
ಹುಟ್ಟಿದ ದಿನದಂದೆ ಕೊನೆಯುಸಿರೆಳೆದ ಆರ್ ಕೆ ಇನ್ನು ನೆನಪು ಮಾತ್ರ.
