ಕುಂಭ ಮೇಳಕ್ಕೆ ಹೋಗಿದ್ದ, ಧಾರವಾಡದ ಎರಡು ಕುಟುಂಬಗಳ ಬ್ಯಾಗ್, ಮೊಬೈಲ್ ಹಾಗೂ ನಗದು ಕಳ್ಳತನ ಮಾಡಿದ ಘಟನೆ ಅಯೋಧ್ಯೆಯಲ್ಲಿ ನಡೆದಿದೆ.
ಕುಂಭಮೇಳದಲ್ಲಿ ಶಾಹಿ ಸ್ನಾನ ಮುಗಿಸಿ ಅಯೋಧ್ಯೆಗೆ ಹೋಗಿದ್ದ ಧಾರವಾಡದ ಎರಡು ಕುಟುಂಬಗಳು, ಶ್ರೀರಾಮನ ದರ್ಶನಕ್ಕೆ ಹೋಗಿದ್ದರು.
ಈ ವೇಳೆ ಕಾರಿನ ಕಿಟಕಿ ಗಾಜು ಒಡೆದು ಬ್ಯಾಗುಗಳನ್ನು ಕಳ್ಳತನ ಮಾಡಲಾಗಿದೆ. 10 ಮೊಬೈಲ್, 20 ಸಾವಿರ ನಗದು, ಎಟಿಎಂ ಕಾರ್ಡ್ ಸೇರಿ ಬಟ್ಟೆಗಳನ್ನು ಕಳ್ಳತನ ಮಾಡಲಾಗಿದೆ.
ಧಾರವಾಡ ಶೆಟ್ಟರ್ ಕಾಲೋನಿಯ ಅರುಣಕುಮಾರ ಬಡಿಗೇರ ಮತ್ತು ಮಾಳಮಡ್ಡಿಯ ಬಸವರಾಜ್ ಕೊಟ್ಯಾಳ್ ಎಂಬ ಕುಟುಂಬ ನಿನ್ನೆ ರಾತ್ರಿ ಅಯೋಧ್ಯೆಯಲ್ಲಿ ಕಾರ್ ಪಾರ್ಕಿಂಗ್ ಮಾಡಿ, ದರ್ಶನಕ್ಕೆ ಹೋಗಿದ್ದರು. ವಾಪಸು ಬಂದ ಮೇಲೆ ಕಾರಿನ ಗಾಜುಗಳನ್ನು ಒಡೆದಿರುವುದನ್ನು ಗಮನಿಸಿದ್ದಾರೆ.
