ದೆಹಲಿ ರೈಲು ನಿಲ್ದಾಣದಲ್ಲಿ ಭೀಕರ ದುರಂತ ನಡೆದಿದೆ. ರೇಲ್ವೆ ಇಲಾಖೆ ಸಿಬ್ಬಂದಿಗಳ ನಿರ್ಲಕ್ಷದಿಂದ ಕಾಲ್ತುಳಿತ ಸಂಭವಿಸಿ 18 ಜನ ಪ್ರಾಣ ಕಳೆದುಕೊಂಡಿದ್ದಾರೆ.
ನವದೆಹಲಿಯ ರೈಲ್ವೇ ನಿಲ್ದಾಣದಲ್ಲಿ ಭಾರಿ ಸಂಖ್ಯೆಯಲ್ಲಿ ಪ್ರಯಾಣಿಕರು ಪ್ರಯಾಗರಾಜಗೆ ಹೋಗಲು ಸಿದ್ದರಾಗಿ ನಿಂತಿದ್ದರು. ರೈಲು ಬಹಳಷ್ಟು ತಡವಾಗಿದ್ದರಿಂದ ಪ್ರಯಾಣಿಕರು ಸುಸ್ತು ಹೊಡೆದಿದ್ದರು.
ಇನ್ನೇನು ರೈಲು ಬಂತು ಅನ್ನುವಷ್ಟರಲ್ಲಿ ಮೈಕ್ ನಲ್ಲಿ ಪ್ರಯಾಗರಾಜ ಹೋಗುವ ರೈಲು ಪ್ಲಾಟ್ ಫಾರ್ಮ್ 12 ರ ಬದಲು 16 ಕ್ಕೆ ಬರಲಿದೆ ಎಂದು ಹೇಳಿದ್ದೆ ತಡ ಎಲ್ಲರು, ಓಡೋಡಿ ಹೋಗಿದ್ದಾರೆ.
ಈ ಸಂದರ್ಭದಲ್ಲಿ ಕಾಲ್ತುಳಿತ ಸಂಭವಿಸಿ, 18 ಜನ ಪ್ರಾಣ ಕಳೆದುಕೊಂಡಿದ್ದಾರೆ. ಸರ್ಕಾರ ಪ್ರಾಣ ಕಳೆದುಕೊಂಡ ಕುಟುಂಬಗಳಿಗೆ ತಲಾ 10 ಲಕ್ಷ ಪರಿಹಾರ ಘೋಷಣೆ ಮಾಡಿದೆ.
ದುರಂತಕ್ಕೆ ಸಂಬಂಧಿಸಿದಂತೆ ರೈಲ್ವೇ ಇಲಾಖೆ ತನಿಖೆಗೆ ಆದೇಶ ನೀಡಿದೆ. ಪ್ರಯಾಗರಾಜಗೆ ಸಾಕಷ್ಟು ಸಂಖ್ಯೆಯಲ್ಲಿ ರೈಲು ಬಿಡದ ಕಾರಣ ಈ ಘಟನೆ ನಡೆದಿದೆ ಎನ್ನಲಾಗಿದೆ.
