Download Our App

Follow us

Home » ಭಾರತ » ಕುಂಭಮೇಳಕ್ಕೆ ಹೊರಟಿದ್ದ ಗೋಕಾಕನ 6 ಜನರ ಸಾವು

ಕುಂಭಮೇಳಕ್ಕೆ ಹೊರಟಿದ್ದ ಗೋಕಾಕನ 6 ಜನರ ಸಾವು

ಮಧ್ಯಪ್ರದೇಶದ ಜಬಲಪೂರ ಬಳಿ ನಡೆದ ರಸ್ತೆ ಅಪಘಾತದಲ್ಲಿ ಗೋಕಾಕ್ ನಗರದ ಆರು ಜನ ಶೃದ್ದಾಳುಗಳು ಮೃತಪಟ್ಟಿದ್ದಾರೆ.ಈ ಪೈಕಿ ಇಬ್ಬರ ಸ್ಥಿತಿ ಗಂಭೀರವಾಗಿದೆ.

ಗೋಕಾಕ್ ತಾಲೂಕಿನ ಲಕ್ಷ್ಮಿ ಬಡಾವಣೆ ನಿವಾಸಿಗಳಾದ ಬಾಲಚಂದ್ರ‌ ಗೌಡರ, ಸುನೀಲ್ ಶೇಡಶ್ಯಾಳೆ, ಬಸವರಾಜ್ ಕುರ್ತಿ, ಬಸವರಾಜ್ ದೊಡಮಾಳ್, ಈರಣ್ಣ ಶೇಬಿನಕಟ್ಟಿ, ವಿರೂಪಾಕ್ಷ ಗುಮತಿ ಎಂಬುವವರು ಸಾವನ್ನಪ್ಪಿದ್ದಾರೆ. 

ಘಟನೆಯಲ್ಲಿ ಗಾಯಗೊಂಡ ಮುಸ್ತಾಕ್ ಶಿಂಧಿಕುರಬೇಟ ಹಾಗೂ ಸದಾಶಿವನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

ಇಂದು ಬೆಳಗಿನ ಜಾವ ಕ್ರೂಸರ್​ ವಾಹನ ಚಾಲಕನ ನಿಯಂತ್ರಣ ತಪ್ಪಿ ಬಸ್​ಗೆ ಡಿಕ್ಕಿ ಹೊಡೆದ ಪರಿಣಾಮ ಈ ಭೀಕರ ಅಪಘಾತ ಸಂಭವಿಸಿದೆ.

ಇವರೆಲ್ಲ ಪ್ರಯಾಗ್‌ರಾಜ್‌ನಲ್ಲಿ ನಡೆಯುತ್ತಿರುವ ಮಹಾ ಕುಂಭಮೇಳಕ್ಕೆ ಹೊರಟಿದ್ದರು. ಕಳೆದ 20 ದಿನಗಳ ಹಿಂದೆ ಬೆಳಗಾವಿಯ ನಾಲ್ಕು ಜನ ಕುಂಭಮೇಳಕ್ಕೆ ಹೋದಾಗ ಮೃತಪಟ್ಟಿದ್ದರು. ಕುಂಭಮೇಳದಲ್ಲಿ ಪುಣ್ಯ ಸ್ನಾನ ಮಾಡಲು ಕೇವಲ 48 ಘಂಟೆ ಬಾಕಿ ಇದ್ದು, ಜನಸಾಗರ ಹರಿದು ಬರುತ್ತಿದೆ. 

Karnataka Files
Author: Karnataka Files

Leave a Comment

RELATED LATEST NEWS

error: Content is protected !!