ರಾಜ್ಯದ ಸೌಹಾರ್ದ ಸಹಕಾರಿ ಕ್ಷೇತ್ರದಲ್ಲಿ ಹೆಸರು ಮಾಡಿದ್ದ ಬೈಲಹೊಂಗಲ ಮೂಲದ ಸಹಕಾರಿ ಬ್ಯಾಂಕ ಬೀದಿಗೆ ಬಂದಿದೆ.
ಡಾ, ವಿರೂಪಾಕ್ಷಪ್ಪ ಸಾಧುನವರ ಅಧ್ಯಕ್ಷತೆಯ ಕಿತ್ತೂರ ರಾಣಿ ಚೆನ್ನಮ್ಮ ಅರ್ಬನ್ ಕ್ರೆಡಿಟ್ ಸೌಹಾರ್ದ ಸಹಕಾರಿ ಬ್ಯಾಂಕಿನ 119 ಶಾಖೆಯಲ್ಲಿ ಹಣ ಇಟ್ಟ ಠೇವಣಿದಾರರು ದಿಕ್ಕುಪಾಲಾಗಿದ್ದಾರೆ.
ನಿನ್ನೇ ಬೈಲಹೊಂಗಲದ ಸಾಧುನವರ ಅವರ ಮನೆಗೆ ಠೇವಣಿದಾರರು ಮುತ್ತಿಗೆಹಾಕಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ತಾವು ಇಟ್ಟ ಡಿಪಾಸಿಟ್ ಹಣ ಕೊಡುವಂತೆ ಆಗ್ರಹಿಸಿದ್ದಾರೆ.
ಈ ನಡುವೆ ಡಾ, ವಿ ಎಸ್ ಸಾಧುನವರ ಭಾವಚಿತ್ರ ಇರುವ “ಕಾಣೆಯಾಗಿದ್ದಾನೆ” ಎಂಬ ಪೋಸ್ಟರ್ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.
ಬಾಂಕಿನ ಮೂಲಗಳ ಪ್ರಕಾರ 119 ಶಾಖೆಗಳಲ್ಲಿ ಸುಮಾರು 40 ಸಾವಿರ ಜನ ಡಿಪಾಸಿಟ್ ಇಟ್ಟಿದ್ದಾರೆ. ಈ 40 ಸಾವಿರ ಜನ ಇಟ್ಟಂತ ಡಿಪಾಸಿಟ್ ಹಣ 800 ಕೋಟಿ ದಾಟುತ್ತೆ ಎನ್ನಲಾಗಿದೆ.
ಮಕ್ಕಳ ಮದುವೆ, ಶಿಕ್ಷಣ, ಆರೋಗ್ಯಕ್ಕಾಗಿ ಹಣ ಠೇವಣಿ ಇಟ್ಟವರು ಸಾಧುನವರ ಅವರ ಮನೆ ಮುಂದೆ ನಿಂತು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
