ಉತ್ತರಾಖಂಡದ ಬದರಿನಾಥದಲ್ಲಿ ಭೀಕರ ಘಟನೆ ಸಂಭವಿಸಿದೆ. ರಸ್ತೆಯಲ್ಲಿ ಕೆಲಸ ಮಾಡುತ್ತಿದ್ದ 57 ಕಾರ್ಮಿಕರು ಏಕಾಏಕಿ ಹಿಮಕುಸಿತಕ್ಕೆ ಸಿಲುಕಿದ್ದಾರೆ.
ಸದ್ಯ ಉತ್ತರಾಖಂಡ ರಾಜ್ಯದಲ್ಲಿ ಭಾರೀ ಹಿಮಪಾತವಾಗುತ್ತಿದೆ. ಬೆಟ್ಟಗಳ ಮೇಲೆ ಹಿಮ ದಟ್ಟವಾಗಿ ಸಂಗ್ರಹವಾಗಿದೆ. ಬದರಿನಾಥ್ ಜಿಲ್ಲೆಯ ಥಾಮ್‌ನಲ್ಲಿರುವ ಬಿಆರ್‌ಒ ಹೆದ್ದಾರಿಯಲ್ಲಿ ಕಾರ್ಮಿಕರು ರಸ್ತೆ ನಿರ್ಮಾಣ ಕಾರ್ಯ ಮಾಡುತ್ತಿದ್ದಾಗ, ಸಮೀಪದಲ್ಲಿದ್ದ ಮಂಜುಗಡ್ಡೆಗಳು ಇದ್ದಕ್ಕಿದ್ದಂತೆ ಮುರಿದು ಬಿದ್ದಿವೆ.
ಹಿಮಕುಸಿತ ಕಾರ್ಮಿಕರ ಮೇಲೆ ಬಿದ್ದಿದ್ದರಿಂದ ಪೊಲೀಸರು ಮತ್ತು ಬಿಆರ್‌ಒ ಸಿಬ್ಬಂದಿ ತಕ್ಷಣ ಸ್ಥಳಕ್ಕೆ ಧಾವಿಸಿದ್ದಾರೆ.
ಮೂಲಗಳ ಪ್ರಕಾರ ಈಗಾಗಲೇ 10 ಮಂದಿಯನ್ನು ಸುರಕ್ಷಿತವಾಗಿ ರಕ್ಷಿಸಲಾಗಿದೆ. ಆದರೆ ಇನ್ನು 47 ಜನ ಕಾರ್ಮಿಕರು ಎಲ್ಲಿದ್ದಾರೆ ಎಂಬುದು ಇನ್ನೂ ಪತ್ತೆಯಾಗಿಲ್ಲ.
ಹಿಮವು ದಟ್ಟವಾಗಿ ಬೀಳುತ್ತಿರುವುದರಿಂದ, ಎಷ್ಟು ಹಿಮವನ್ನು ಸೇರಿಸಿದರೂ, ಅದು ಇನ್ನೂ ಸಂಗ್ರಹವಾಗುತ್ತಲೇ ಇದೆ. ಮಾನ ಗ್ರಾಮದ ಬಿಆರ್‌ಒ ಕ್ಯಾಂಪ್‌ನ ಸಮೀಪವೇ ಈ ದುರ್ಘಟನೆ ನಡೆದಿದೆ.
