ಪ್ರಗತಿಪರ ಚಿಂತಕ.ಹೋರಾಟಗಾರರಾಗಿದ್ದ ಆನಂದ ಹನಮಂತಗೌಡ ಹೊಸಗೌಡರ ಇಂದು ಕೊನೆಯುಸಿರೆಳೆದಿದ್ದಾರೆ.
ಮೂಲತ ಸಂಘ ಪರಿವಾರದ ಒಡನಾಡಿಯಾಗಿದ್ದ ಅವರು, 1980ರ ದಶಕದಲ್ಲಿ ಮಹಾದಾಯಿ ಹೋರಾಟ ಆರಂಭಿಸಿದ್ದರು.
ಆನಂದ ಹೊಸಗೌಡರ ತಾಲೂಕಿನಾದ್ಯಂತ ಬಿಜೆಪಿ ಪಕ್ಷವನ್ನು ಸಂಘಟಿಸುವ ಮೂಲಕ 1994 ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿಯ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದರು.
ಜತೆಗೆ ಮಲಪ್ರಭಾ ನಾಡು ಪತ್ರಿಕೆ ಸಂಸ್ಥಾಪಕ ಸಂಪಾದಕರಾಗಿ ನಿರ್ಭಿಡೆಯಿಂದ ಕಾರ್ಯನಿರ್ವಹಿಸಿದ್ದರು.
ಮಾಜಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ, ಮಾಜಿ ಕೇಂದ್ರ ಸಚಿವ ದಿವಂಗತ ಆನಂತಕುಮಾರ ಒಡನಾಟ ಹೊಂದಿದ್ದ ಆನಂದ ಹೊಸಗೌಡರ, ಜನಾನುರಾಗಿಯಾಗಿದ್ದರು.
ಮೃತರು ಪತ್ನಿ.ಇಬ್ಬರು ಪುತ್ರರು ಸೇರಿದಂತೆ ಅಪಾರ ಬಂಧುಗಳನ್ನು ಅಗಲಿದ್ದಾರೆ.
