ಧಾರವಾಡದಲ್ಲಿ ಇಂದಿನಿಂದ ಪವಿತ್ರ ರಂಜಾನ್ ಉಪವಾಸ ಆರಂಭವಾಗಿದೆ.
ಶೈಕ್ಷಣಿಕ ಕಾಶಿ ಎಂದು ಕರೆಯಲ್ಪಡುವ ಧಾರವಾಡದಲ್ಲಿ, ಓದಲು ಬಂದಿರುವ ಪರ ಊರಿನ ವಿಧ್ಯಾರ್ಥಿಗಳಿಗೆ ಸೆಹರಿ ವ್ಯವಸ್ಥೆ ಮಾಡಲಾಗಿದೆ.
ಧಾರವಾಡದ ಜಯನಗರದಲ್ಲಿರುವ ಕೌಸರ್ ಮಸೀದಿಯಲ್ಲಿ ಪ್ರತಿನಿತ್ಯ ಎರಡು ಸಾವಿರಕ್ಕೂ ಹೆಚ್ಚು ವಿಧ್ಯಾರ್ಥಿಗಳಿಗೆ ಸೆಹರಿ ವ್ಯವಸ್ಥೆ ಮಾಡಲಾಗುತ್ತಿದೆ.
ಕೌಸರ್ ಮಸೀದಿಯಲ್ಲಿ ಇತ್ತಿಹಾದ್ ಗ್ರೂಪ್ ನವರು ಕಳೆದ ಹಲವಾರು ವರ್ಷಗಳಿಂದ ಸೆಹರಿ ವ್ಯವಸ್ಥೆ ಮಾಡುತ್ತಾ ಬರುತ್ತಿದ್ದಾರೆ. ಸಾವಿರಾರು ವಿಧ್ಯಾರ್ಥಿಗಳಿಗೆ ಅನುಕೂಲ ಕಲ್ಪಿಸಿದ್ದಾರೆ.
ಧಾರವಾಡದ ಹತ್ತಾರು ಕಾಲೇಜುಗಳು ಹಾಗೂ ತರಬೇತಿ ಸಂಸ್ಥೆಗಳಲ್ಲಿನ ವಿಧ್ಯಾರ್ಥಿಗಳು ಇದರ ಲಾಭ ಪಡೆಯುತ್ತಿದ್ದಾರೆ.
