ಐಐಟಿ ಪದವೀಧರ ಬಾಬಾ ಎಂದೇ ಪ್ರಸಿದ್ಧರಾಗಿರುವ ಅಭಯ್ ಸಿಂಗ್ ಅವರನ್ನು ಜೈಪುರದ ಹೋಟೆಲ್‌ನಲ್ಲಿ ಗಾಂಜಾ ಸಹಿತ ಬಂಧಿಸಲಾಗಿದೆ.
ಕುಂಭಮೇಳದಲ್ಲಿ ಗಮನಸೆಳೆದಿದ್ದ ಅಭಯ್ ಸಿಂಗ್, ಐಐಟಿ ಪದವಿ ಪಡೆದು ಬಾಬಾ ಆಗಿದ್ದರ ಕುರಿತು ದೊಡ್ಡ ಸುದ್ದಿಯಾಗಿದ್ದರು.
ಅಲ್ಲದೇ, ಟಿ ವಿ ಸಂದರ್ಶನವೊಂದರಲ್ಲಿ ಸ್ವಾಮೀಜಿಗಳು, ಐಐಟಿ ಬಾಬಾರನ್ನು ತರಾಟೆಗೆ ತೆಗೆದುಕೊಂಡಿದ್ದರು. ಇದಾದ ಬಳಿಕ ಸಾಮಾಜಿಕ ಮಾಧ್ಯಮದಲ್ಲಿ ಆತ್ಮಹತ್ಯೆಗೆ ಬೆದರಿಕೆ ಹಾಕಿದ್ದರು.
ಅಭಯ್ ಸಿಂಗ್ ತಂಗಿದ್ದ ಹೋಟೆಲ್ ನಿಂದ ಪೊಲೀಸರು ಗಾಂಜಾವನ್ನು ವಶಪಡಿಸಿಕೊಂಡಿದ್ದಾರೆ. ಎನ್‌ಡಿಪಿಎಸ್ ಕಾಯ್ದೆಯಡಿಯಲ್ಲಿ ಅವರ ವಿರುದ್ಧ ಕ್ರಮ ಕೈಗೊಳ್ಳಲು ಮುಂದಾಗಿದ್ದಾರೆ. ಸಧ್ಯ ಅವರನ್ನು ಜೈಪುರ ಪೊಲೀಸರು ಬಂಧಿಸಿದ್ದಾರೆ.
