ಗಡಿ ಜಿಲ್ಲೆ ಬೆಳಗಾವಿಯಲ್ಲಿ ಹೃದಯ ವಿದ್ರಾವಕ ಘಟನೆ ನಡೆದಿದೆ.
ಗಂಡನ ಕಿರುಕುಳಕ್ಕೆ ಒಳಗಾದ ಮಹಿಳೆಯೊಬ್ಬಳು ತನ್ನ ಮೂವರು ಮಕ್ಕಳೊಂದಿಗೆ ಆತ್ಮಹತ್ಯೆಗೆ ಶರಣಾಗಿದ್ದಾಳೆ.
ಬೆಳಗಾವಿ ಜಿಲ್ಲೆಯ ರಾಯಭಾಗ ತಾಲೂಕಿನ ಚಿಂಚಲಿ ಪಟ್ಟಣದಲ್ಲಿ ಈ ಘಟನೆ ನಡೆದಿದ್ದು, ದೃಶ್ಯ ಮನಕಲುಕುತ್ತಿದೆ.
ಶಾರಧಾ ಢಾಲೆ ಎಂಬ 38 ವರ್ಷದ ಮಹಿಳೆ, ತನ್ನ ಮಕ್ಕಳಾದ ಅನುಷಾ, ಅಮೃತಾ ಹಾಗೂ ಆದರ್ಶ ಎಂಬ ಮೂವರು ಮಕ್ಕಳೊಂದಿಗೆ ಕೃಷ್ಣಾ ನದಿಗೆ ಹಾರಿ ಪ್ರಾಣ ಬಿಟ್ಟಿದ್ದಾಳೆ.
ಬೆಳಿಗ್ಗೆ ಕೃಷ್ಣಾ ನದಿಯ ದಡದಲ್ಲಿ ಶವಗಳು ತೇಲುತ್ತಿದ್ದುದ್ದನ್ನು ಕಂಡಾಗ ಪ್ರಕರಣ ಬೆಳಕಿಗೆ ಬಂದಿದೆ.
ಕಳೆದ ಹಲವು ದಿನಗಳಿಂದ ಶಾರದಾ ಪತಿ ಅಶೋಕ್ ಢಾಲೆ ಕುಡಿತದ ಚಟಕ್ಕೆ ಬಿದ್ದಿದ್ದ ಎಂದು ಹೇಳಲಾಗಿದೆ. ಅಶೋಕ ಕುಡಿದು ಬಂದು ಹೆಂಡತಿಯೊಂದಿಗೆ ಜಗಳ ಮಾಡುತ್ತಿದ್ದ ಎಂಬ ಆರೋಪ ಕೇಳಿ ಬಂದಿದೆ.
ರಾಯಬಾಗ ಪೊಲೀಸರು ಅಶೋಕನನ್ನು ಬಂಧಿಸಿದ್ದಾರೆ. ಪ್ರಕರಣ ರಾಯಬಾಗ ಪೊಲೀಸ್ ಠಾಣೆಯಲ್ಲಿ ಧಾಖಲಾಗಿದೆ.
