ಆಂತರಿಕ ಭದ್ರತೆಯ ಐ ಜಿ ಪಿಯಾಗಿದ್ದ ಡಿ ರೂಪಾರನ್ನು ಸರ್ಕಾರ, ಕರ್ನಾಟಕ ಸಿಲ್ಕ್ ಮಾರ್ಕೆಟಿಂಗ್ ಬೋರ್ಡ್ ಲಿಮಿಟೆಡನ್ ಎಮ್ ಡಿ ಯನ್ನಾಗಿ ವರ್ಗ ಮಾಡಿದೆ.
ಮಹಿಳಾ ಡಿ ಐ ಜಿ ವರ್ತಿಕಾ ಕಟಿಯಾರ ಹಾಗೂ ಎ ಡಿ ಜಿ ಪಿ ಡಿ ರೂಪಾ ನಡುವೆ ಇತ್ತೀಚಿಗೆ ಜಟಾಪಟಿ ನಡೆದಿತ್ತು.
ತಮ್ಮ ಕಚೇರಿಯಲ್ಲಿನ ಧಾಖಲೆಗಳನ್ನು ಡಿ ರೂಪಾ ರವರು ತರಿಸಿಕೊಂಡಿದ್ದಾರೆ ಎಂದು ವರ್ತಿಕಾ ಕಟಿಯಾರ ಅವರು ಆರೋಪಿಸಿದ್ದರು.
ಡಿ ರೂಪಾ ರವರ ವಿರುದ್ಧ ವರ್ತಿಕಾ ಕಟಿಯಾರ ಅವರು ರಾಜ್ಯ ಸರ್ಕಾರದ ಪ್ರಧಾನ ಕಾರ್ಯದರ್ಶಿಯವರಿಗೆ ದೂರು ನೀಡಿದ್ದರು.
ಇದಾದ ಬಳಿಕ ವರ್ತಿಕಾ ಕಟಿಯಾರರನ್ನು ಮಾತ್ರ ಸರ್ಕಾರ ವರ್ಗ ಮಾಡಿತ್ತು. ಇದು ಕೆಲವು ಪೊಲೀಸ್ ಅಧಿಕಾರಿಗಳ ಕೆಂಗಣ್ಣಿಗೆ ಗುರಿಯಾಗಿತ್ತು. ಇದೀಗ ಡಿ ರೂಪಾ ರವರನ್ನು ವರ್ಗಾವಣೆ ಮಾಡಲಾಗಿದೆ.
