Download Our App

Follow us

Home » ಕರ್ನಾಟಕ » ಹೆಸರಾಂತ ನಟಿ ಶಬಾನಾ ಆಜ್ಮಿ ಅವರಿಗೆ ಜೀವಮಾನ ಸಾಧನೆ ಪ್ರಶಸ್ತ

ಹೆಸರಾಂತ ನಟಿ ಶಬಾನಾ ಆಜ್ಮಿ ಅವರಿಗೆ ಜೀವಮಾನ ಸಾಧನೆ ಪ್ರಶಸ್ತ

ಕರ್ನಾಟಕ ಸರ್ಕಾರವು ಆಯೋಜಿಸಿರುವ 16 ನೇ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ ಅಂಗವಾಗಿ ಕೊಡಮಾಡುವ ಜೀವಮಾನ ಸಾಧನೆ ಪ್ರಶಸ್ತಿಗೆ ಭಾರತೀಯ ಚಿತ್ರರಂಗದ ಹೆಸರಾಂತ ನಟಿ,ಪ್ರತಿಭಾವಂತ ಕಲಾವಿದೆ ಶಬಾನಾ ಅಜ್ಮಿ ಭಾಜನರಾಗಿದ್ದಾರೆ.

ಭಾರತದ ಹೆಸರಾಂತ ಕವಿ,ಸಾಹಿತಿ ಕೈಫ್-ಇ-ಅಜ್ಮಿ ಅವರ ಮಗಳಾಗಿರುವ ಶಬಾನಾ ಅಜ್ಮಿ, ವಿದ್ಯಾರ್ಥಿ ದೆಸೆಯಿಂದಲೂ ಕಲೆ, ಸಾಹಿತ್ಯ, ಸಾಂಸ್ಕೃತಿಕ ರಂಗದಲ್ಲಿ ತೊಡಗಿಸಿಕೊಂಡು ಸಿನಿಮಾ ಕ್ಷೇತ್ರದಲ್ಲಿ ಮೇರುಸಾಧನೆ ಮಾಡಿದ್ದಾರೆ.  

ವೈವಿಧ್ಯತೆಯಲ್ಲಿ ಏಕತೆ ಸಾಧಿಸಿರುವ ಭಾರತದ ಬಹುತ್ವ ಪರಂಪರೆಯ ಹೆಮ್ಮೆಯ ವಾರಸುದಾರರಾಗಿರುವ ಅವರು ದೇಶದ ಚಿತ್ರರಂಗಕ್ಕೆ ಸುಮಾರು ಐದು ದಶಕಗಳ ಕಾಲ ಸಲ್ಲಿಸಿರುವ ಸೇವೆ ಪರಿಗಣಿಸಿ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಹಾಗೂ ಕರ್ನಾಟಕ ಚಲನಚಿತ್ರ ಅಕಾಡೆಮಿಯು ಈ ಪ್ರಶಸ್ತಿ ನೀಡಿ ಗೌರವಿಸುತ್ತಿದೆ.

ಈ ಪ್ರಶಸ್ತಿಯು 10 ಲಕ್ಷ ರೂ.ನಗದು,ಸ್ಮರಣಿಕೆ ಒಳಗೊಂಡಿದೆ.

Karnataka Files
Author: Karnataka Files

Leave a Comment

RELATED LATEST NEWS

error: Content is protected !!