ಭಾರತದಲ್ಲಿ ಬಾಟಲಿ ನೀರಿನ ಮಾರುಕಟ್ಟೆ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಕೈಗಾರಿಕೆಗಳಲ್ಲಿ ಒಂದಾಗಿದೆ.
ಭಾರತವು ನೈಸರ್ಗಿಕ ಜಲ ಸಂಪನ್ಮೂಲಗಳಿಂದ ಸಮೃದ್ಧವಾಗಿದ್ದರೂ, ಹೆಚ್ಚುತ್ತಿರುವ ಜನಸಂಖ್ಯೆ, ಹೆಚ್ಚುತ್ತಿರುವ ಜಾಗತಿಕ ತಾಪಮಾನ ಏರಿಕೆಯಿಂದಾಗಿ ಈ ಉಧ್ಯಮ ಸಾವಿರಾರು ಕೋಟಿಯ ಸಾಮ್ರಾಜ್ಯ ಹೊಂದಿದೆ.
ಬೈಲಿ, ಬಿಸ್ಲೆರಿ, ಅಕ್ವಾಫಿನಾ, ಕಿನ್ಲೆಯಂತಹ ಕಂಪನಿಗಳು ಭಾರತದ ಮಾರುಕಟ್ಟೆಯಲ್ಲಿ ಹಿಡಿತ ಹೊಂದಿವೆ.
ಮಾರುಕಟ್ಟೆ ಅಧ್ಯಯನದ ಪ್ರಕಾರ ಪ್ರತಿ ವರ್ಷ 24 ಸಾವಿರ ಕೋಟಿಯಷ್ಟು ಬಾಟಲ್ ನೀರು ಮಾರಾಟವಾಗುತ್ತಿದೆ.
ಮೊದಲ ಬಾಯಿಗೆ ನೀರನ್ನು, ಬಾಟಲ್ ನಲ್ಲಿ ಮಾರಾಟ ಮಾಡಬಹುದು ಎಂದು 70 ರ ದಶಕದಲ್ಲಿ ಪ್ರಯೋಗ ನಡೆಸಿದ್ದ ಬಿಸ್ಲೇರಿ ಕಂಪನಿ ಇದೀಗ ಸಾವಿರಾರು ಕೋಟಿ ಒಡೆತನದ ಕಂಪನಿಯಾಗಿದೆ.
