ವಿನಯ ಕುಲಕರ್ಣಿ ಬ್ರಿಗೇಡ್ ವತಿಯಿಂದ ಧಾರವಾಡದಲ್ಲಿ ಇದೇ ದಿನಾಂಕ 13 ರಂದು ಹಲಗೆ ಹಬ್ಬ ಆಯೋಜಿಸಲಾಗಿದೆ. ಅಂದು ಮೂರು ಘಂಟೆಗೆ ಕಲಾಭವನದಿಂದ ಹಲಗೆ ಹಬ್ಬದ ಮೆರವಣಿಗೆ ಆರಂಭವಾಗಲಿದೆ.
ಇದಕ್ಕೆ ಸಂಬಂಧಪಟ್ಟಂತೆ, ಗಡಿಗೆ ಒಡೆಯುವ ಸ್ಪರ್ಧೆ ಮತ್ತು ರೆನ್ ಡಾನ್ಸ್ ಕಾರ್ಯಕ್ರಮದ ಪೋಸ್ಟರನ್ನು ಕೆ ಎಮ್ ಎಫ್ ನಿರ್ದೇಶಕಿ, ಶಿವಲೀಲಾ ವಿನಯ ಕುಲಕರ್ಣಿಯವರು ಬಿಡುಗಡೆ ಮಾಡಿದರು.
ಇದೇ ಸಂದರ್ಭದಲ್ಲಿ ಮಾತನಾಡಿದ ಅವರು, ಹಲಗೆ ಹಬ್ಬದ ನಂತರ ದಿನಾಂಕ 15/3/2025 ರಂದು ಮುಂಜಾನೆ 10 ಗಂಟೆಗೆ ಧಾರವಾಡದ ಶಿವಾಜಿ ವೃತ್ತದಲ್ಲಿ ಗಡಿಗೆ ಒಡೆಯುವ ಸ್ಪರ್ಧೆ ಹಾಗೂ ರೇನ್ ಡಾನ್ಸ್ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.
ಹೋಳಿ ಹಬ್ಬಕ್ಕೆ ಬರುವ ಮಹಿಳೆಯರಿಗೆ ವಿಶೇಷ ವ್ಯವಸ್ಥೆ ಮಾಡಿದ್ದು, ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮ ಯಶಸ್ವಿಗೊಳಿಸಬೇಕೆಂದು ವಿನಂತಿಸಿದರು.
ಈ ಸಂಧರ್ಭದಲ್ಲಿ ಅರವಿಂದ ಏಗನಗೌಡರ, ಪ್ರಕಾಶ ಘಾಟಗೆ, ಶಿವಾನಂದ ಮೆಣಸಿನಕಾಯಿ,ದೀಪಾ ನೀರಲಕಟ್ಟಿ ಆನಂದ ಸಿಂಗನಾಥ, ನವೀನ ಕದಂ, ಸಂಜೀವ ಲಕಮನಹಳ್ಳಿ ಕಿಶೋರ ಬಡಿಗೇರ,ವಿನಯ ಬಾಬರ, ಈಶ್ವರ ಹಂಚಿನಾಳ ಶಿವಾನಂದ ಗಿರಿಯಪ್ಪನವರ ಮುಂತಾದವರು ಉಪಸ್ಥಿತರಿದ್ದರು.
