ಧಾರವಾಡದ ಕೆಸಿಡಿ ಕಾಲೇಜು ಸರ್ಕಲ್ ನಲ್ಲಿ ಇದೇ ದಿನಾಂಕ 15 ರಂದು ಬಿಜೆಪಿ ಶಾಸಕ ಅರವಿಂದ ಬೆಲ್ಲದ ಅಭಿಮಾನಿಗಳು ಹಮ್ಮಿಕೊಂಡಿರುವ ಬಣ್ಣದ ಉತ್ಸವಕ್ಕೆ ರಾಣಿ ಚೆನ್ನಮ್ಮ ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ನಾಗರಾಜ ಗೌರಿ ವಿರೋದ ವ್ಯಕ್ತಪಡಿಸಿದ್ಧಾರೆ.
ಅಂದು ಕರ್ನಾಟಕ ಕಾಲೇಜಿನಲ್ಲಿ ಪಿಯುಸಿ ದ್ವಿತೀಯ ವರ್ಷದ ಇಂಗ್ಲೀಷ್ ಪರೀಕ್ಷೆ ನಡೆಯಲಿದೆ. ವಿಧ್ಯಾರ್ಥಿಗಳಿಗೆ ತೊಂದರೆಯಾಗಲಿದ್ದು, ಧಾರವಾಡದ ಕೆಸಿಡಿ ಸರ್ಕಲ್ ನಲ್ಲಿ ಬಣ್ಣದ ಉತ್ಸವ ನಡೆಸಲು ಪರವಾನಿಗೆ ನೀಡದಂತೆ ನಾಗರಾಜ ಗೌರಿ, ಜಿಲ್ಲಾಧಿಕಾರಿ ಹಾಗೂ ಪೊಲೀಸ್ ಆಯುಕ್ತರಿಗೆ ಮನವಿ ಸಲ್ಲಿಸಿದ್ದಾರೆ.
ಪರೀಕ್ಷೆ ಸಮಯದಲ್ಲಿ ಡಿ ಜೆ ಹಚ್ಚುವದು, ಕಿರುಚಾಡುವದು ಮತ್ತು ಹಲಗೆ ಬಾರಿಸುವ ಸಪ್ಪಳ, ವಿದ್ಯಾರ್ಥಿಗಳಿಗೆ ತೊಂದರೆಯನ್ನುಂಟು ಮಾಡಲಿದೆ ಎಂದು ಮನವಿಯಲ್ಲಿ ತಿಳಿಸಿದ್ದಾರೆ.
