ಪವಾಡ ಕಾಮಣ್ಣ ಎಂದೇ ಹೆಸರಾಗಿರುವ ನವಲಗುಂದದ ರಾಮಲಿಂಗ ಕಾಮಣ್ಣನ ಮೂರ್ತಿ ಪ್ರತಿಷ್ಟಾಪನೆಯಾಗಿದೆ.
ಆಂಧ್ರ, ಮಹಾರಾಷ್ಟ್ರ ಸೇರಿದಂತೆ ನಾಲ್ಕೈದು ರಾಜ್ಯಗಳಿಂದ ಲಕ್ಷಾಂತರ ಭಕ್ತರು ಕಾಮಣ್ಣನ ದರ್ಶನಕ್ಕೆ ನವಲಗುಂದಕ್ಕೆ ಬರುತ್ತಿದ್ದಾರೆ.
ರಣ ಬಿಸಿಲಿಗೆ ಭಕ್ತರು ಹೈರಾಣಾಗಿದ್ದಾರೆ. ಮೂರು ಕಿಲೋಮೀಟರನಷ್ಟು ಉದ್ದನೆಯ ಸರತಿ ಸಾಲಿನಲ್ಲಿ ನಿಂತು ಕಾಮಣ್ಣನ ದರ್ಶನ ಪಡೆಯುತ್ತಿದ್ದಾರೆ.
ಬಂದಂತ ಭಕ್ತರಿಗೆ ಧಾರವಾಡ ಲೋಕಸಭಾ ಕ್ಷೇತ್ರದ ಕಾಂಗ್ರೇಸ್ ಅಭ್ಯರ್ಥಿಯಾಗಿದ್ದ ವಿನೋದ ಅಸೂಟಿ ಅಭಿಮಾನಿಗಳು ಸರ್ವಧರ್ಮ ವೇದಿಕೆ ಎಂಬ ಸಂಘಟನೆ ಮೂಲಕ ದಿನಂಪ್ರತಿ ೨೦ ಸಾವಿರ ಜನರಿಗೆ ಮಜ್ಜಿಗೆ ಹಾಗೂ ನೀರಿನ ಬಾಟಲಿ ವಿತರಣೆ ಮಾಡುತ್ತಿದ್ದಾರೆ.
ನವಲಗುಂದ ಕ್ಷೇತ್ರದಲ್ಲಿ ತಮ್ಮದೇ ಆದ ಅಭಿಮಾನಿಗಳ ಪಡೆ ಹೊಂದಿರುವ ವಿನೋದ ಅಸೂಟಿ, ಒಮ್ಮೆ ಶಾಸಕ ಸ್ಥಾನ ಹಾಗು ಒಮ್ಮೆ ಲೋಕಸಭೆ ಚುನಾವಣೆಯಲ್ಲಿ ಸೋತರು ಜನರ ಸೇವೆಯಲ್ಲಿ ತೊಡಗಿದ್ದಾರೆ.
ಪುರಸಭೆ ಅಧ್ಯಕ್ಷ ಶಿವಾನಂದ ತಡಸಿ, ಸದಸ್ಯರುಗಳಾದ ಮಂಜುನಾಥ ಜಾದವ, ಅಪ್ಪಣ್ಣ ಹಳ್ಳದ, ಜೀವನ ಪವಾರ, ಮೋದಿನ್ ಶಿರೂರ,ಮಾಹಾಂತೇಶ್ ಭೋವಿ ಸುರೇಶ ಮೇಟಿ, ಮಾದೇವ ಚುಂಚನೂರ, ಮಂಜುನಾಥ ಬೈಲೂರ, ಶಿವಾನಂದ ಚಲವಾದಿ, ಲಕ್ಷ್ಮಣ ಗುಡಾರದ , ಪ್ರವೀಣ ಮೂಗಣ್ಣವರ,ಕುಶಾಲ್ ನರಗುಂದ ಸೇರಿದಂತೆ ಅನೇಕರು ಬಂದಂತ ಭಕ್ತರ ಸೇವೆಯಲ್ಲಿ ತೊಡಗಿದ್ದಾರೆ.
