ನವಲಗುಂದ ಶಾಸಕ ಎನ್ ಎಚ್ ಕೋನರೆಡ್ಡಿಯವರು ಇಂದು ಕುಟುಂಬ ಸಮೇತರಾಗಿ ಬಂದು ರಾಮಲಿಂಗ ಕಾಮಣ್ಣನ ದರ್ಶನ ಪಡೆದರು.
ಇದುವರೆಗೆ ಸುಮಾರು ಮೂರು ಲಕ್ಷ ಜನರು ರಾಮಲಿಂಗ ಕಾಮಣ್ಣನ ದರ್ಶನ ಪಡೆದಿದ್ದಾರೆ. ಭಕ್ತರ ಆಶೋತ್ತರ ಈಡೇರಿಸುವ ಕಾಮ ಎಂದೇ ಇದು ಪ್ರಸಿದ್ದಿ ಪಡೆದಿದೆ.
ಶಾಸಕ ಕೋನರೆಡ್ಡಿಯವರಿಗೆ ದೇವಸ್ಥಾನದ ಆಡಳಿತ ಮಂಡಳಿಯಿಂದ ಸನ್ಮಾನಿಸಲಾಯಿತು.
ಮಾಜಿ ಸಚಿವ ಶಂಕರ ಪಾಟೀಲ ಮುನೇನಕೊಪ್ಪರ ಧರ್ಮಪತ್ನಿ ಪ್ರಭಾವತಿ ಪಾಟೀಲ, ನವಲಗುಂದದಲ್ಲಿ ಪ್ರತಿಷ್ಟಾಪನೆಗೊಂಡಿರುವ ಐತಿಹಾಸಿಕ ರಾಮಲಿಂಗ ಕಾಮಣ್ಣನ ದರ್ಶನ ಪಡೆದರು.
ರಾಮಲಿಂಗ ದೇವಸ್ಥಾನದ ಆಡಳಿತ ಮಂಡಳಿಯಿಂದ ಅವರನ್ನು ಸನ್ಮಾನಿಸಲಾಯಿತು.
ಮತ್ತೊಂದೆಡೆ ಧಾರವಾಡ ಲೋಕಸಭಾ ಕ್ಷೇತ್ರದ ಕಾಂಗ್ರೇಸ್ ಅಭ್ಯರ್ಥಿಯಾಗಿದ್ದ ವಿನೋದ ಅಸೂಟಿ ಸಹ ರಾಮಲಿಂಗ ಕಾಮಣ್ಣನ ದರ್ಶನ ಪಡೆದರು.
ವಿನೋದ ಅಸೂಟಿ ಅಭಿಮಾನಿಗಳು ಸರ್ವ ಧರ್ಮ ವೇದಿಕೆ ಮೂಲಕ, ಮೂರು ದಿನಗಳ ಕಾಲ ಕಾಮಣ್ಣನ ದರ್ಶನಕೆ ಬಂದಿದ್ದ ಸಾವಿರಾರು ಭಕ್ತರಿಗೆ ಮಜ್ಜಿಗೆ ಹಾಗೂ ನೀರಿನ ಬಾಟಲಿಗಳನ್ನು ಹಂಚಿದರು.
