ಹೋಟೆಲ್ ಬಳಿ ಗುಂಪಾಗಿ ನಿಂತಿದ್ದ ಬಿಜೆಪಿ ಅಧ್ಯಕ್ಷನ ಮೇಲೆ ಪಿಎಸ್ಐ ಹಲ್ಲೆ ಮಾಡಿದ ಘಟನೆ ಚಿತ್ರದುರ್ಗದ ತುರುವನೂರು ಬಳಿ ನಡೆದಿದೆ.
ಮಧುಗಿರಿ ಬಿಜೆಪಿ ಅಧ್ಯಕ್ಷ ಹನುಮಂತೇಗೌಡ ಎಂಬುವವರಿಗೆ ಪಿಎಸ್ಐ ಗಾದಿಲಿಂಗಪ್ಪ ಕಪಾಳಕ್ಕೆ ಹೊಡೆದಿದ್ದಾರೆ.
ಪಿಎಸ್ಐ ಗಾದಿಲಿಂಗಪ್ಪಾ ಹಲ್ಲೆ ಮಾಡಿದ ವಿಡಿಯೋ ವೈರಲ್ ಆಗಿದ್ದು, ರಾಜ್ಯ ಬಿಜೆಪಿ ಅಧ್ಯಕ್ಷ ಬಿ ವೈ ವಿಜಯೇಂದ್ರ ಈ ಘಟನೆಗೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ್ದಾರೆ.
ರಾಜ್ಯದಲ್ಲಿ ಕಾನೂನು ಸುವವ್ಯಸ್ತೆ ಹಾಳಾಗಿದ್ದು, ಪೊಲೀಸರ ದಬ್ಬಾಳಿಕೆ ಜಾಸ್ತಿಯಾಗಿದೆ ಎಂದು ಕಿಡಿಕಾರಿದ್ದಾರೆ.
ಹಲ್ಲೆ ಮಾಡಿದ ಪಿಎಸ್ಐ ಗಾದಿಲಿಂಗಪ್ಪಾನನ್ನು ಅಮಾನತು ಮಾಡದೆ ಇದ್ದಲ್ಲಿ ಹೋರಾಟ ಆರಂಭಿಸುವದಾಗಿ ಎಚ್ಚರಿಸಿದ್ದಾರೆ.
