Download Our App

Follow us

Home » ಆರೋಗ್ಯ » ಧಾರವಾಡ ಕೃಷಿ ವಿಶ್ವವಿದ್ಯಾಲಯದ ಪ್ರಥಮ ಕುಲಪತಿ, ಶ್ರೇಷ್ಟ ರೈತ ವಿಜ್ಞಾನಿ ಇನ್ನಿಲ್ಲ

ಧಾರವಾಡ ಕೃಷಿ ವಿಶ್ವವಿದ್ಯಾಲಯದ ಪ್ರಥಮ ಕುಲಪತಿ, ಶ್ರೇಷ್ಟ ರೈತ ವಿಜ್ಞಾನಿ ಇನ್ನಿಲ್ಲ

ಧಾರವಾಡ ಕೃಷಿ ವಿಶ್ವವಿದ್ಯಾಲಯದ ಪ್ರಥಮ ಕುಲಪತಿಯಾಗಿದ್ದ ಡಾ. ಜೆ ವಿ ಗೌಡ ಇಂದು ಕೊನೆಯುಸಿರೆಳೆದರು.

1986 ರಿಂದ 1989 ರ ವರೆಗೆ ಧಾರವಾಡ ಕ್ರಷಿ ವಿ ವಿ ಯ ಮೊದಲ ಕುಲಪತಿಯಾಗಿದ್ದ ಗೌಡ ಅವರು, ವಿಶ್ವವಿದ್ಯಾಲಯವನ್ನು ಬಹು ಎತ್ತರಕ್ಕೆ ಬೆಳೆಸಿದ್ದರು.

ಅವರ ಅವಧಿಯಲ್ಲಿ ರಾಯಚೂರಿನಲ್ಲಿ ಕೃಷಿ ಕಾಲೇಜು ಹಾಗೂ ಬೀದರನಲ್ಲಿ ಪಶು ವೈದ್ಯಕೀಯ ಕಾಲೇಜು ಆರಂಭ ಮಾಡಿದ್ದರು.

ಕೃಷಿ ಸಂಶೋಧನೆಯಲ್ಲಿ ಅಮೋಘ ಸಾಧನೆ ಮಾಡಿದ್ದ ಗೌಡ ಅವರು, ಕೃಷಿ ಸಂಶೋಧನೆ ಸಂಬಂಧಿತ 12 ಕಮಿಟಿಗಳಿಗೆ ಅಧ್ಯಕ್ಷರಾಗಿ ಕೆಲಸ ಮಾಡಿದ್ದರು. ಇವರು ಮಂಡಿಸಿದ ಪ್ರಭಂದಗಳು, ಗ್ರಂಥಗಳು, ಅಂತಾರಾಷ್ಟ್ರೀಯ ಮಾನ್ಯತೆ ಪಡೆದಿದ್ದವು.

ಕಳೆದ ವರ್ಷವಷ್ಟೇ ಅವರ ಅಭಿಮಾನಿಗಳು ಹಾಗೂ ಶಿಷ್ಯರು, ಗೌಡ ಅವರ 87 ನೇ ಜನ್ಮದಿನದ ಕಾರ್ಯಕ್ರಮ ಆಚರಿಸಿದ್ದರು.

ಕೃಷಿ ಸಂಶೋಧನೆಯಲ್ಲಿ ಪಾಂಡಿತ್ಯ ಸಾಧಿಸಿದ್ದ ಜೆವಿ ಗೌಡರವರು, ಜೋಳ, ಭತ್ತ, ಗೋವಿನ ಜೋಳ, ವಾಣಿಜ್ಯ ಕೃಷಿಗಾಗಿ ಮೆಣಸಿನಕಾಯಿ ಮತ್ತು ಕಬ್ಬಿನ ತಳಿಗಳನ್ನು ಸಂಶೋಧನೆ ಮಾಡಿದ್ದರು. 

ಡಾ. ಜಗೇನಹಳ್ಳಿ ವಿರುಪನಗೌಡರ ಇಂದು ನಿಧನರಾಗಿದ್ದು, ಅವರ ಅಂತ್ಯಕ್ರಿಯೆ ಇಂದು ಮಧ್ಯಾಹ್ನ 2-30 ಕ್ಕೆ ಹೊಸ ಬಸ್ ನಿಲ್ದಾಣದ ಹಿಂದೆ ಇರುವ ರುದ್ರಭೂಮಿಯಲ್ಲಿ ನೆರವೇರಲಿದೆ.

ಧಾರವಾಡದ ಕೃಷಿ ವಿ ವಿ ಆವರಣದಲ್ಲಿ, ಗೌಡ ಅವರ ಪಾರ್ಥಿವ ಶರೀರವನ್ನು ಸಾರ್ವಜನಿಕ ದರ್ಶನಕ್ಕೆ ಇಡಲಾಗಿದೆ. ಇಂದು ಮುಂಜಾನೆ 11 ರಿಂದ 1-30 ರ ವರೆಗೆ ಅವರ ಅಭಿಮಾನಿಗಳು, ಶಿಷ್ಯರು, ಪಾರ್ಥಿವ ಶರೀರದ ದರ್ಶನ ಪಡೆಯಬಹುದಾಗಿದೆ ಎಂದು ಕುಟುಂಬ ಮೂಲಗಳು ತಿಳಿಸಿವೆ.

 

 

Karnataka Files
Author: Karnataka Files

Leave a Comment

RELATED LATEST NEWS

Top Headlines

ಜಾತಿಗಣತಿ ಅಲ್ಲ, ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ : ಮುಖ್ಯಮಂತ್ರಿ ಸ್ಪಷ್ಟನೆ

ಜಾತಿಗಣತಿ ಕುರಿತಾಗಿ ರಾಜ್ಯ ರಾಜಕೀಯದಲ್ಲಿ ಬಿರುಗಾಳಿ ಎದ್ದಿದ್ದು, ಜಾತಿಗಣತಿ ವಿಚಾರವಾಗಿ ಆಡಳಿತ ಪಕ್ಷದಲ್ಲಿ ಇರುಸು ಮುರುಸು ಕಂಡು ಬಂದಿದೆ. ಇದು ಜಾತಿಗಣತಿ ಅಲ್ಲಾ, ಇದೊಂದು ಸಾಮಾಜಿಕ ಮತ್ತು

Live Cricket

error: Content is protected !!