ರಾಜ್ಯದಲ್ಲಿ ಸಿ ಡಿ ಫ್ಯಾಕ್ಟರಿ ಹಾಗೂ ಪೆನ್ ಡ್ರೈವ್ ಫ್ಯಾಕ್ಟರಿ ಇದೆ. ಇದೊಂದು ದೊಡ್ಡ ಪಿಡುಗು ಇದನ್ನ ಬಯಲಿಗೆ ತರಬೇಕಾಗಿದೆ. ಹೀಗೆ ಅಂದವರು ಸಹಕಾರ ಸಚಿವ ಕೆ ಎನ್ ರಾಜಣ್ಣ.
ರಾಜ್ಯದ ಓರ್ವ ಸಚಿವರನ್ನು ಹನಿಟ್ರಾಪ್ ಮಾಡಲಾಗಿದೆ ಎಂದು ಬಸನಗೌಡ ಪಾಟೀಲ ಯತ್ನಾಳರು ಸದನದಲ್ಲಿ ಗಂಭೀರ ಆರೋಪ ಮಾಡುತ್ತಿದ್ದಂತೆ ಚರ್ಚೆ ಸದನ ಗಂಭೀರತೆಯತ್ತ ತಿರುಗಿತು.
ಬಸನಗೌಡ ಪಾಟೀಲ ಯತ್ನಾಳರ ಮಾತಿಗೆ ಎದ್ದು ನಿಂತ ಸಹಕಾರಿ ಸಚಿವ ಕೆ ಎನ್ ರಾಜಣ್ಣ, ನನ್ನ ಮೇಲೆ ಎರಡು ಸಲ ಹನಿಟ್ರಾಪ್ ಗೆ ಪ್ರಯತ್ನ ನಡೆದಿದೆ. ನನ್ನ ಹತ್ತಿರ ಪುರಾವೆ ಇದೆ ಎಂದರು.
ಮುಂದುವರೆದು ಮಾತನಾಡಿದ ಕೆ ಎನ್ ರಾಜಣ್ಣ, ವಿವಿಧ ಪಕ್ಷಗಳ ಒಟ್ಟು 48 ಸಿ ಡಿ ಗಳನ್ನು ಮಾಡಲಾಗಿದೆ ಎಂದು ಗಂಭೀರ ಆರೋಪ ಮಾಡಿದ್ದಾರೆ.
ಇದರಲ್ಲಿ ರಾಜ್ಯ ನಾಯಕರು ಅಷ್ಟೇ ಅಲ್ಲಾ ಕೇಂದ್ರ ನಾಯಕರು ಇದ್ದಾರೆ ಎಂದು ಸ್ಪೋಟಕ ಮಾಹಿತಿ ಬಿಚ್ಚಿಟ್ಟರು. ನನ್ನ ಮೇಲೆ ನಡೆದ ಹನಿಟ್ರಾಪ್ ಪ್ರಕರಣಕ್ಕೆ ಸಂಬಂಧಿಸಿದಂತೆ ಗೃಹ ಸಚಿವರಿಗೆ ದೂರು ನೀಡಿದ್ದೇನೆ ಎಂದು ಕೆ ಎನ್ ರಾಜಣ್ಣ ತಿಳಿಸಿದ್ದಾರೆ.
