ಮಹತ್ವದ ಬೆಳವಣಿಗೆಯಲ್ಲಿ ಧಾರವಾಡ ತಾಲೂಕಿನ ಶಿವಳ್ಳಿ ಹಾಲು ಉತ್ಪಾದಕರ ಸಹಕಾರಿ ಸಂಘಕ್ಕೆ ಆಡಳಿತಾಧಿಕಾರಿಯನ್ನು ನೇಮಕ ಮಾಡಲಾಗಿದೆ.
ಶಿವಳ್ಳಿ ಹಾಲು ಉತ್ಪಾದಕರ ಸಹಕಾರಿ ಸಂಘದಿಂದ ಕೆ ಎಮ್ ಎಫ್ ಗೆ ನಿರ್ದೇಶಕರಾಗಿ ಆಯ್ಕೆಗೊಂಡಿದ್ದ ಶಂಕರ ಮುಗದ ನಂತರ ಕೆ ಎಮ್ ಎಫ್ ಅಧ್ಯಕ್ಷರಾಗಿ ಆಯ್ಕೆಯಾಗಿದ್ದರು. ಅಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆ ತೀವ್ರ ರಾಜಕೀಯ ಜಿದ್ದಾ ಜಿದ್ದಿಗೆ ಕಾರಣವಾಗಿತ್ತು.
ಸಧ್ಯ ಶಿವಳ್ಳಿ ಹಾಲು ಉತ್ಪಾದಕರ ಸಹಕಾರಿ ಸಂಘದ ಅವಧಿ ಮುಗಿದ ಹಿನ್ನೆಲೆಯಲ್ಲಿ ಸಹಕಾರಿ ಇಲಾಖೆಯ ಸಹಾಯಕ ನೊಂದಣಾಧಿಕಾರಿ ಆದೇಶ ಹೊರಡಿಸಿ, ಆಡಳಿತಾಧಿಕಾರಿಯನ್ನಾಗಿ ಸಹಕಾರಿ ಇಲಾಖೆಯ ಅಧಿಕಾರಿ ಮದಸೂಧನರನ್ನು ಆಡಳಿತಾಧಿಕಾರಿಯಾಗಿ ನೇಮಕ ಮಾಡಲಾಗಿದೆ.
ಅವಧಿ ಮುಂದುವರೆಸುವಂತೆ ಹೈಕೋರ್ಟ್ ಮೋರೆ ಹೋಗಿದ್ದ ಶಂಕರ ಮುಗದ
ಶಿವಳ್ಳಿ ಹಾಲು ಉತ್ಪಾದಕರ ಸಹಕಾರಿ ಸಂಘವನ್ನು ಪ್ರತಿನಿಧಿಸಿದ್ದ ಶಂಕರ ಮುಗದ ಅವರು, ಶಿವಳ್ಳಿ ಹಾಲು ಉತ್ಪಾದಕರ ಸಹಕಾರಿ ಸಂಘದ ಅವಧಿಯನ್ನು ಮುಂದುವರೆಸುವಂತೆ ಹೈಕೋರ್ಟ್ ಮೋರೆ ಹೋಗಿದ್ದರು. 05-01-2025 ರಂದು ಅವಧಿ ಮುಗಿದಿತ್ತು.
180 ಸದಸ್ಯರನ್ನು ಹೊಂದಿದ್ದ ಶಿವಳ್ಳಿ ಹಾಲು ಉತ್ಪಾದಕರ ಸಹಕಾರಿ ಸಂಘಕ್ಕೆ ನಿಯಮಾವಳಿಯಂತೆ ಅವಧಿ ಪೂರ್ಣಗೊಳ್ಳುವ ಮುನ್ನ ಚುನಾವಣೆ ನಡೆಯಬೇಕಿತ್ತು.
180 ಸದಸ್ಯರ ಪೈಕಿ 150 ಕ್ಕೂ ಹೆಚ್ಚು ಜನ ಬಾಕಿದಾರರಾಗಿದ್ದರು. ಸಹಕಾರಿ ಇಲಾಖೆಯ ನಿಯಮಾವಳಿಯಂತೆ ಬಾಕಿದಾರರಿಗೆ 195 ದಿನಗಳ ಕಾಲದ ಕಾರಣ ಕೇಳಿ ನೋಟಿಸ್ ನೀಡಬೇಕಿತ್ತು. ಅದಾದ ಬಳಿಕ ಚುನಾವಣೆ ನಡೆಯಬೇಕಿತ್ತು.
ಆದರೆ ಇದಾವದನ್ನು ಮಾಡದೆ ಇರೋ ಪರಿಣಾಮ ಧಾರವಾಡದ ಸಹಾಯಕ ನೊಂದಣಾಧಿಕಾರಿ ಶಿವಳ್ಳಿ ಹಾಲು ಉತ್ಪಾದಕರ ಸಹಕಾರಿ ಸಂಘವನ್ನು ಸೂಪರಶಿಡ್ ಮಾಡಿ ಆಡಳಿತಾಧಿಕಾರಿ ನೇಮಕ ಮಾಡಿದ್ದಾರೆ.
ಇದರಿಂದಾಗಿ ಸದ್ಯ ಕೆ ಎಮ್ ಎಫ್ ಅಧ್ಯಕ್ಷರಾಗಿರುವ ಶಂಕರ ಮುಗದರ ಅಧ್ಯಕ್ಷ ಸ್ಥಾನಕ್ಕೆ ಕುತ್ತು ಬಂದಂತಾಗಿದೆ.
