ಡೆಂಗಿ, ಮಲೇರಿಯಾ, ಕೋವಿಡ್‌ನಂತಹ ಕಾಯಿಲೆಗಳು ಮನುಷ್ಯನ ಜೀವವನ್ನು ಹಿಪ್ಪಿಹಿಂಡಿದಂತೆ ರಾಜ್ಯದಾದ್ಯಂತ ಬೆಕ್ಕುಗಳಿಗೂ ಸಾಂಕ್ರಾಮಿಕ ರೋಗಬಾಧೆ ಎದುರಾಗುವ ಲಕ್ಷಣಗಳು ಕಂಡು ಬರುತ್ತಿವೆ.
ಮಾರಕ FPV ವೈರಸ್ ನಿಂದಾಗಿ ರಾಯಚೂರಿನಲ್ಲಿ ನೂರಕ್ಕೂ ಹೆಚ್ಚು ಬೆಕ್ಕುಗಳು ಸಾವನ್ನಪ್ಪಿವೆ ಎಂದು ವರದಿಯಾಗಿದೆ.
ಫೀಲೈನ್ ಪ್ಯಾನ್‌ಲ್ಯೂಕೊಪೀನಿಯ ಎಂಬ ವೈರಸ್, ಬೆಕ್ಕುಗಳನ್ನು ಬಲಿಪಡೆದುಕೊಳ್ಳುತ್ತಿದೆ.
ಈ ವೈರಸ್‌ಗೆ ತುತ್ತಾಗಿರುವ ಬೆಕ್ಕುಗಳಲ್ಲಿ ಏಕಾಏಕಿ ಬಿಳಿರಕ್ತ ಕಣಗಳ ಕೊರತೆಯಾಗಿ ಸಾವನ್ನಪ್ಪುತ್ತವೆ.
