ರಾಜ್ಯ ರಾಜಕಾರಣದಲ್ಲಿ ಹನಿ ಟ್ರಾಪ್ ಸದ್ದು ದೆಹಲಿವರೆಗೂ ಹುಯಿಲೆಬ್ಬಿಸಿದೆ.
ಹಿರಿಯ ಸಚಿವ ಕೆ ಎನ್ ರಾಜಣ್ಣ ಸದನದಲ್ಲಿ ನೀಡಿದ್ದ ಹೇಳಿಕೆ ಅಲ್ಲೋಲ ಕಲ್ಲೋಲ ವಾತಾವರಣ ಸೃಷ್ಟಿಮಾಡಿದೆ.
ಅಷ್ಟಕ್ಕೂ ಹನಿ ಟ್ರಾಪ್ ಮಾಡಲು ಬಂದವಳು ಯಾರು ?
ಅಷ್ಟಕ್ಕೂ ಸಚಿವ ಕೆ ಎನ್ ರಾಜಣ್ಣರನ್ನು ಹನಿ ಟ್ರಾಪ್ ಮಾಡಲು ಬಂದವಳ ಹೆಸರು ಹೇಳದೆ ಹೋದರು, ಆಕೆ ಧರಿಸಿದ್ದ ವೇಷ ಭೂಷಣದ ಬಗ್ಗೆ ಹೇಳಿಕೆ ಕೊಟ್ಟಿದ್ದಾರೆ.
ನೀಲಿ ಬಣ್ಣದ ಜೀನ್ಸ್ ಹಾಕಿಕೊಂಡು ಬಂದಿದ್ದ ಯುವತಿ ತನ್ನನ್ನು ಹನಿ ಟ್ರಾಪ್ ಮಾಡಲು ಬಂದಿದ್ದಳು ಎಂದು ಸಚಿವ ರಾಜಣ್ಣ ಪತ್ರಿಕಾಗೋಷ್ಟಿಯಲ್ಲಿ ಹೇಳಿದ್ದಾರೆ.
ಒಮ್ಮೆ ಭೇಟಿಯಾಗಲು ಬಂದಿದ್ದ ಆಕೆ, ತನ್ನನ್ನು ಹೈಕೋರ್ಟ್ ಲಾಯರ್ ಎಂದು ಪರಿಚಯಿಸಿಕೊಂಡಿದ್ದಳು. ಇದಾದ ನಂತರ ಬೇರೆ ಯುವತಿ ಬಂದಿದ್ದಳು ಎಂದು ರಾಜಣ್ಣ ಹೇಳಿಕೆ ನೀಡಿದ್ದಾರೆ.
ಸಂಜೆ ಗೃಹ ಸಚಿವರನ್ನು ಭೇಟಿ ಮಾಡುವದಾಗಿ ರಾಜಣ್ಣ ಹೇಳಿಕೆ ನೀಡಿದ್ದು, ದೂರು ಧಾಖಲಾದಲ್ಲಿ, ಪೊಲೀಸರು ಲಭ್ಯ ಇರುವ ಸಿ ಸಿ ಕ್ಯಾಮರಾಗಳ ಪರಿಶೀಲನೆ ನಡೆಸಲಿದ್ದಾರೆ.
