ಮುಂಬೈನ ಧಾರಾವಿಯಲ್ಲಿ ಸಿಲಿಂಡರ್ ಸ್ಫೋಟದಿಂದಾಗಿ ಭೀಕರ ಅಗ್ನಿ ದುರಂತ ಸಂಭವಿಸಿದೆ. ಟ್ರಕ್ ನಲ್ಲಿದ್ದ ತುಂಬಿದ ಗ್ಯಾಸ್ ಸಿಲೆಂಡರ್ ಗಳು ಒಂದೊದಾಗಿ ಸ್ಫೋಟಗೊಂಡಿವೆ.
ಮುಂಬೈನ ಧಾರಾವಿ ಪ್ರದೇಶದಲ್ಲಿ ಈ ಘಟನೆ ನಡೆದಿದೆ. ಪಿಎನ್‌ಜಿಪಿ ಕಾಲೋನಿಯಲ್ಲಿ ಟ್ರಕ್‌ನಲ್ಲಿ ಇರಿಸಲಾಗಿದ್ದ ಸಿಲಿಂಡರ್‌ಗಳಲ್ಲಿ ಸ್ಫೋಟದಿಂದಾಗಿ ಮುಂಬೈನಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಒಂದರ ನಂತರ ಒಂದು ಸ್ಫೋಟವು ಪ್ರದೇಶದಲ್ಲಿ ಭೀತಿಯನ್ನು ಸೃಷ್ಟಿಸಿದೆ.
ಬೆಂಕಿ ನಂದಿಸುವ ಕಾರ್ಯ ಮುಂದುವರೆದಿದ್ದು, ಪ್ರಾಣಹಾನಿ ಬಗ್ಗೆ ಇನ್ನು ಮಾಹಿತಿ ಸಿಕ್ಕಿಲ್ಲ ಎನ್ನಲಾಗಿದೆ.
