ನಿಗದಿ ಮಾಡಿದ ಅವಧಿಯಲ್ಲಿ ಆಸ್ತಿ ವಿವರ ಕೊಡದ ಹಿನ್ನೆಲೆಯಲ್ಲಿ ವಿಜಯಪುರ ಮಹಾನಗರ ಪಾಲಿಕೆಯ ಎಲ್ಲ ಸದಸ್ಯರ ಸದಸ್ಯತ್ವವನ್ನು ರದ್ದುಗೊಳಿಸಿ ಪ್ರಾದೇಶಿಕ ಆಯುಕ್ತ ಎಸ್ ಬಿ ಶೆಟ್ಟೆಣ್ಣವರ ಆದೇಶ ಹೊರಡಿಸಿದ್ದಾರೆ.
ಪಾಲಿಕೆಯ ಒಟ್ಟು 35 ಸದಸ್ಯರು ಅವರ ಚರಾಸ್ತಿ ಹಾಗೂ ಸ್ಥಿರಾಸ್ತಿಗಳ ಘೋಷಣಾ ಪತ್ರ ನೀಡದ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ.
ಆಗಸ್ಟ್ 28, 2022 ರಂದು ಪಾಲಿಕೆಯ 35 ಸ್ಥಾನಗಳಿಗೆ ಚುನಾವಣೆ ನಡೆದಿತ್ತು. ಜನೆವರಿ 9, 2024 ರಂದು ಮೊದಲ ಸಾಮಾನ್ಯ ಸಭೆ ನಡೆದಿತ್ತು.
ನಗರಪಾಲಿಕೆಗಳ ಅಧಿನಿಯಮದ ಪ್ರಕಾರ, ಸದಸ್ಯರ ಅವಧಿ ಪ್ರಾರಂಭವಾದ ಒಂದು ತಿಂಗಳ ಅವಧಿಯಲ್ಲಿ ಆಯ್ಕೆಯಾದ ಪಾಲಿಕೆ ಸದಸ್ಯರು ಆಸ್ತಿ ಘೋಷಣೆ ಮಾಡಬೇಕಿತ್ತು.
ಇದಾವದನ್ನು ಮಾಡದ ಹಿನ್ನೆಲೆಯಲ್ಲಿ ಬಿಜೆಪಿಯ 17 ಕಾಂಗ್ರೇಸ್ಸಿನ 10, ಎಮ್ ಐ ಎಮ್ ಪಕ್ಷದ 2, ಜೆಡಿಎಸ್ ನ 1 ಹಾಗೂ 5 ಜನ ಪಕ್ಷೇತರ ಸದಸ್ಯರ ಸದಸ್ಯತ್ವವನ್ನು ರದ್ದುಗೊಳಿಸಲಾಗಿದೆ.
