ಬಸನಗೌಡ ಪಾಟೀಲ ಯತ್ನಾಳ ಬಿಜೆಪಿಯಿಂದ 6 ವರ್ಷಗಳ ಕಾಲ ಉಚ್ಚಾಟನೆಯಾದ ಬಳಿಕ, ಕುಟುಂಬ ರಾಜಕಾರಣ, ಹೊಂದಾಣಿಕೆ ರಾಜಕಾರಣದ ವಿರುದ್ಧ ಪಕ್ಷದೊಳಗೆ ಸಮರ ಸಾರಿದ್ದ ವಿಜಯಪುರ ಶಾಸಕ ಬಸನಗೌಡ ಪಾಟೀಲ ಯತ್ನಾಳರ ಟ್ವಿಟ್ಟರ್ ಖಾತೆಯಿಂದ ಪ್ರಧಾನಿ ಮೋದಿಯವರಿದ್ದ ಬಿಜೆಪಿ ಭಾವಚಿತ್ರ ತೆಗೆಯಲಾಗಿದೆ.
ಅದರ ಬದಲಾಗಿ ಗಣವೇಶ ಧಾರಿಗಳ ಆರ್ ಎಸ್ ಎಸ್ ಭಾವಚಿತ್ರ ಹಾಕಲಾಗಿದೆ. ತಮ್ಮನ್ನು ಉಚ್ಚಾಟನೆ ಮಾಡಿದ ಕಾರಣಕ್ಕೆ ಅಸಮಾಧಾನಗೊಂಡಿರುವ ಯತ್ನಾಳರಿಗೆ ಕಟ್ಟರ ಹಿಂದುಗಳು ಧೈರ್ಯ ತುಂಬುತ್ತಿದ್ದಾರೆ.
ಬಸನಗೌಡ ಪಾಟೀಲ ಯತ್ನಾಳರ ಎಕ್ಸ್ ಖಾತೆಯಲ್ಲಿ ಅನೇಕ ಜನರು ಹೈಕಮಾಂಡ್ ತಪ್ಪು ನಿರ್ಧಾರ ಪ್ರಕಟ ಮಾಡಿದೆ. ಧೈರ್ಯ ಕಳೆದುಕೊಳ್ಳಬೇಡಿ, ಹೊಸ ಹಿಂದುತ್ವದ ಪಕ್ಷ ಕಟ್ಟಿ ಎಂದು ಸಲಹೆ ನೀಡುತ್ತಿದ್ದಾರೆ.
