ರಾಜ್ಯದಾಧ್ಯಂತ ಎಸ್ ಎಸ್ ಎಲ್ ಸಿ ಮತ್ತು ಪಿ ಯು ಸಿಯ ನಕಲಿ ಅಂಕಪಟ್ಟಿ ನೀಡಿ ವಂಚನೆ ಮಾಡುತ್ತಿದ್ದ ಜಾಲವನ್ನು ಬೆಂಗಳೂರು ಪೊಲೀಸರು ಭೇಧಿಸಿದ್ದಾರೆ.
ಬೆಂಗಳೂರಿನ ಸಿ ಸಿ ಬಿ ಪೊಲೀಸರು, ಧಾರವಾಡದ ಶ್ರೀನಗರದಲ್ಲಿನ ಪ್ರಶಾಂತ ಎಂಬುವವನ ಕಚೇರಿಯಿಂದ 350 ಕ್ಕೂ ಹೆಚ್ಚು ನಕಲಿ ಅಂಕಪಟ್ಟಿಗಳನ್ನು ವಶಪಡಿಸಿಕೊಂಡಿದ್ದಾರೆ.
ಪ್ರಶಾಂತ ಜೊತೆ ಇಬ್ಬರನ್ನು ಸಿ ಸಿ ಬಿ ಪೊಲೀಸರು ಬಂಧಿಸಿದ್ದು, ಇದರಲ್ಲಿ ಗದಗ ಜಿಲ್ಲೆಯ ಓರ್ವ ಹಾಗೂ ಬೆಂಗಳೂರು ಮೂಲದ ಓರ್ವ ಆರೋಪಿ ಇದ್ದಾನೆ.
ಆಶ್ಚರ್ಯ ಎಂದರೆ, ಆರೋಪಿಗಳು ನೀಡಿದ ನಕಲಿ ಅಂಕಪಟ್ಟಿಯಿಂದ ಕೆಲವು ಜನ ಸರ್ಕಾರಿ ನೌಕರಿ ಪಡೆದುಕೊಂಡಿದ್ದಾರೆ.
