ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳರ ಉಚ್ಚಾಟನೆ, ಪಂಚಮಸಾಲಿ ಸಮುದಾಯದಲ್ಲಿ ಆಕ್ರೋಶಕ್ಕೆ ಕಾರಣವಾಗಿದೆ.
ಉಚ್ಚಾಟನೆಯಂತಹ ಕ್ರಮ ನೀಚ ಕೃತ್ಯ ಎಂದಿರುವ ಕೂಡಲಸಂಗಮದ ಜಯ ಮೃತ್ಯುಂಜಯ ಸ್ವಾಮೀಜಿ, ಯಾರು ನಮ್ಮ ಸಮುದಾಯಕ್ಕೆ ಮೀಸಲಾತಿ ಕೊಡಲು ಹಿಂದೇಟು ಹಾಕಿದ್ದರೋ, ಅದೇ ಶಕ್ತಿ ಇವತ್ತು ಬಸನಗೌಡ ಪಾಟೀಲ ಯತ್ನಾಳರನ್ನು ಹೊರಗಟ್ಟುವಲ್ಲಿ ಮೇಲುಗೈ ಸಾಧಿಸಿದೆ ಎಂದಿದ್ದಾರೆ.
ಬಸನಗೌಡ ಪಾಟೀಲ ಯತ್ನಾಳರ ಜೊತೆ ಸಮುದಾಯ ನಿಲ್ಲಲಿದ್ದು, ಲಿಂಗಾಯತ ಶಾಸಕರು ಬಿಜೆಪಿ ಬಿಟ್ಟು ಹೊರಬರುವಂತೆ ಸ್ವಾಮೀಜಿ ಕರೆ ನೀಡಿದ್ದಾರೆ.
ನಾಳೆ ಬೆಳಗಾವಿಯ ಗಾಂಧಿ ಭವನದಲ್ಲಿ ಸಭೆ ನಡೆಸುವದಾಗಿ ಹೇಳಿರುವ ಸ್ವಾಮೀಜಿಗಳು, ರಾಜ್ಯದಾಧ್ಯಂತ ಪಂಚಮಸಾಲಿಗಳು ಒಂದು ದಿನ ಪ್ರತಿಭಟನೆ ಮಾಡುವಂತೆ ಕರೆ ನೀಡಿದ್ದಾರೆ.
