ಪರ ವಿರೋದಗಳ ನಡುವೆ ಇಂದು ಪರಿಶಿಷ್ಟ ಸಮುದಾಯಗಳ ಒಳ ಮೀಸಲಾತಿ ಕುರಿತ ನಾಗಮೋಹನ ದಾಸ ಅವರ ಮಧ್ಯಂತರ ವರದಿಯನ್ನು ಸರ್ಕಾರ ಸ್ವೀಕರಿಸಿದೆ.
ಪರಿಶಿಷ್ಟ ಸಮುದಾಯಗಳ ಒಳ ಮೀಸಲಾತಿಗೆ ಸಂಬಂಧಿಸಿದಂತೆ ರಚಿಸಲಾಗಿದ್ದ ನ್ಯಾಯಮೂರ್ತಿ ನಾಗಮೋಹನ್ ದಾಸ್ ಅವರ ಏಕ ಸದಸ್ಯತ್ವ ಪೀಠ ಆಯೋಗದಿಂದ ಇಂದು ಮಧ್ಯಂತರ ವರದಿಯನ್ನು ಸ್ವೀಕರಿಸಲಾಯಿತು.
ಈ ಸಂದರ್ಭದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಸಚಿವರಾದ ಕೆ ಹೆಚ್ ಮುನಿಯಪ್ಪ, ಆರ್ ಬಿ ತಿಮ್ಮಾಪುರ್, ಹೆಚ್ ಆಂಜನೇಯ ಸೇರಿದಂತೆ ಸರ್ಕಾರದ ಉನ್ನತ ಅಧಿಕಾರಿಗಳು ಈ ವೇಳೆ ಉಪಸ್ಥಿತರಿದ್ದರು.
ರಾಜ್ಯ ಸರ್ಕಾರ ಕೆಲ ಸಮಾಜಗಳ ಒತ್ತಡಕ್ಕೆ ಮಣಿದು 15 ವರ್ಷಗಳ ಹಿಂದಿನ ಹಳೆಯ ಮಾಹಿತಿ ಪಡೆದುಕೊಂಡು ಒಳ ಮೀಸಲಾತಿಯ ಮಧ್ಯಂತರ ವರದಿ ಜಾರಿ ಮಾಡುವುದು ಸರಿಯಲ್ಲ’ ಎಂದು ಅಖಿಲ ಕರ್ನಾಟಕ ಬಂಜಾರ, ಭೋವಿ ಮತ್ತು ಕೊರಮ ಸಮಾಜಗಳ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ತಿಪ್ಪಣ್ಣ ಒಡೆಯರಾಜ ಅಸಮಾಧಾನ ವ್ಯಕ್ತಪಡಿಸಿದ್ದರು.
ಜಾತಿಗಣತಿ ವರದಿ ಸರಿಯಿಲ್ಲ, ದತ್ತಾಂಶವೂ ಸರಿಯಿಲ್ಲ. ಮರು ಜನಗಣತಿ ಮಾಡಿ ಸಮರ್ಪಕವಾಗಿ ಅಂಕಿ ಅಂಶಗಳನ್ನು ತಯಾರಿಸಿದ ನಂತರ ಒಳ ಮೀಸಲಾತಿ ಜಾರಿ ಮಾಡಬೇಕು’ ಎಂದು ಅಖಿಲ ಕರ್ನಾಟಕ ಬಂಜಾರ, ಭೋವಿ ಮತ್ತು ಕೊರಮ ಸಮಾಜಗಳ ಕ್ಷೇಮಾಭಿವೃದ್ಧಿ ಸಂಘ ಆಗ್ರಹಿಸಿತ್ತು.
ಇದೆಲ್ಲದರ ಮಧ್ಯೆ ಸರ್ಕಾರ ನಾಗಮೋಹನ ದಾಸರ ಏಕ ಸದಸ್ಯ ಆಯೋಗದ ಮಧ್ಯಂತರ ವರದಿ ಸ್ವೀಕರಿಸಿದ್ದು, ಈ ವಿಷಯ ರಾಜ್ಯದಲ್ಲಿ ಸದ್ದು ಮಾಡಲಿದೆ ಎನ್ನಲಾಗಿದೆ.
