Download Our App

Follow us

Home » ಕಾನೂನು » ಏಪ್ರಿಲ್ 1 ರಿಂದ ರಾಜ್ಯದಲ್ಲಿ ಟೋಲ್ ಶುಲ್ಕ ದರ ಹೆಚ್ಚಳ

ಏಪ್ರಿಲ್ 1 ರಿಂದ ರಾಜ್ಯದಲ್ಲಿ ಟೋಲ್ ಶುಲ್ಕ ದರ ಹೆಚ್ಚಳ

ಏಪ್ರಿಲ್ 1 ರಿಂದ ಕರ್ನಾಟಕದಲ್ಲಿ ಟೋಲ್ ದರ ಶೇ. 3-5 ರಷ್ಟು ಹೆಚ್ಚಳವಾಗಲಿದೆ.

ವರದಿಯ ಪ್ರಕಾರ, ಕಣಿಮಿಣಿಕೆ ಮತ್ತು ಶೇಷಗಿರಿಹಳ್ಳಿ (ಬೆಂಗಳೂರು-ಮೈಸೂರು), ನಂಗ್ಲಿ (ಬೆಂಗಳೂರು-ತಿರುಪತಿ), ಬಾಗೇಪಲ್ಲಿ (ಬೆಂಗಳೂರು-ಹೈದರಾಬಾದ್), ಸಾದಹಳ್ಳಿ (ಬೆಂಗಳೂರು ವಿಮಾನ ನಿಲ್ದಾಣ ರಸ್ತೆ), ಮತ್ತು ಹುಲಿಕುಂಟೆ ಮತ್ತು ನಲ್ಲೂರು ದೇವನಹಳ್ಳಿ (ಸ್ಯಾಟಲೈಟ್ ಟೌನ್ ಆರ್ಸಿಂಗ್ ರೋಡ್ ಟೌನ್) ಈ ಪ್ಲಾಜಾಗಳಲ್ಲಿ ಟೋಲ್ ಶುಲ್ಕಗಳು ಹೆಚ್ಚಾಗಲಿವೆ ಎನ್ನಲಾಗಿದೆ.

ಕರ್ನಾಟಕವು ಏಪ್ರಿಲ್ 1 ರಿಂದ ಟೋಲ್ ದರಗಳನ್ನು ಶೇ. 3-5 ರಷ್ಟು ಹೆಚ್ಚಿಸಲು ಸಜ್ಜಾಗಿದ್ದು, ಮುಂದಿನ ದಿನಗಳಲ್ಲಿ ಅಧಿಸೂಚನೆ ಹೊರಡಿಸಲಾಗುತ್ತದೆ ಎಂದು ಗೊತ್ತಾಗಿದೆ.

ಸಧ್ಯ ಕರ್ನಾಟಕದಲ್ಲಿ 66 ಟೋಲ್ ಪ್ಲಾಜಾಗಳಿವೆ. ಹೆಚ್ಚಿನ ಟೋಲ್ ಪ್ಲಾಜಾಗಳಲ್ಲಿ ಪರಿಷ್ಕೃತ ದರಗಳು ಅನ್ವಯವಾಗಲಿವೆ.

ಮಾರ್ಚ್ 19 ರಂದು ರಾಜ್ಯಸಭೆಗೆ ಗಡ್ಕರಿ ಅವರು ನೀಡಿದ ಹೇಳಿಕೆ ಪ್ರಕಾರ, 2023-24ರಲ್ಲಿ ಭಾರತದಲ್ಲಿ 64,809.86 ಕೋಟಿ ರೂಪಾಯಿ ಟೋಲ್ ಸಂಗ್ರಹವಾಗಿತ್ತು.

Karnataka Files
Author: Karnataka Files

Leave a Comment

RELATED LATEST NEWS

error: Content is protected !!