ಮ್ಯಾನ್ಮಾರ್‌ನಲ್ಲಿ ಪರಿಸ್ಥಿತಿ ದಿನದಿಂದ ದಿನಕ್ಕೆ ಹದಗೆಡುತ್ತಿದೆ.
ಮ್ಯಾನ್ಮಾರ್‌ನಲ್ಲಿ ಎರಡನೇ ದಿನವಾದ ಇಂದು ಸಹ ಭೂಕಂಪ ಸಂಭವಿಸಿದೆ.
5.1 ತೀವ್ರತೆಯ ಭೂಕಂಪ ಇಂದು ಸಂಭವಿಸಿದ್ದು, ನಿನ್ನೇ 7.7 ತೀವ್ರತೆಯ ಭೀಕರ ಭೂಕಂಪ ಸಂಭವಿಸಿ, ಅಪಾರ ವಿನಾಶವನ್ನುಂಟು ಮಾಡಿತ್ತು.
ಸಾವಿನ ಸಂಖ್ಯೆ 1002 ದಾಟಿದೆ ಎಂದು ಹೇಳಲಾಗಿದ್ದು, ಅಪಾರ ಪ್ರಮಾಣದ ಸಾವು ನೋವು ಸಂಭವಿಸಿದೆ.
4000 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ ಎಂದು ಹೇಳಲಾಗಿದ್ದು, ಅನೇಕರು ಅವಶೇಷಗಳ ಅಡಿಯಲ್ಲಿ ಸಿಲುಕಿಕೊಂಡಿದ್ದಾರೆ.
ನೆರೆಯ ರಾಷ್ಟ್ರಗಳು, ಮ್ಯಾನ್ಮಾರ್ ದೇಶದ ನೆರವಿಗೆ ಧಾವಿಸಿವೆ. ಭಾರತ ಸಹ ಊಟ ಹಾಗೂ ಅನೇಕ ದಿನನಿತ್ಯ ಬಳಕೆಯ ವಸ್ತುಗಳನ್ನು ರವಾನೆ ಮಾಡಿದೆ.
