ಬಿಜೆಪಿಯಿಂದ ಉಚ್ಚಾಟನೆಗೊಂಡಿರುವ ಹಿಂದೂ ಫೈರ್ ಬ್ರಾಂಡ್ ಬಸನಗೌಡ ಪಾಟೀಲ ಯತ್ನಾಳರ ಸಿಟ್ಟು ಮತ್ತಷ್ಟು ಜಾಸ್ತಿಯಾಗಿದೆ.
ಅಪ್ಪ ಮಕ್ಕಳ ಆಟಕ್ಕೆ ಬ್ರೆಕ್ ಹಾಕಿಯೇ ಸಿದ್ದ ಎಂದು ಹೊರಟಿದ್ದ ಯತ್ನಾಳರಿಗೆ ಬಿಜೆಪಿ ಭಾರಿ ಶಾಕ್ ನೀಡಿದ್ದಾಗಿದೆ.
ಇಷ್ಟಾದರು ಸಹ ಯತ್ನಾಳ ಅವರು, ಕುಟುಂಬ ರಾಜಕಾರಣ, ಹೊಂದಾಣಿಕೆ ರಾಜಕಾರಣದ ಬಗ್ಗೆ ಮಾತಾಡುತ್ತಾ, ನನ್ನ ಉಚ್ಚಾಟನೆ ಹಿಂದೆ ಅಪ್ಪ ಮಕ್ಕಳ ಆಟ ನಡೆದಿದೆ ಎಂದು ನೇರವಾಗಿ ಆರೋಪಿಸಿದ್ದಾರೆ.
ಇದಕ್ಕೆ ನೇರವಾಗಿ ಕೌಂಟರ್ ಕೊಟ್ಟಿರುವ ರಾಜ್ಯ ಬಿಜೆಪಿ ಅಧ್ಯಕ್ಷ ಬಿ ವೈ ವಿಜಯೇಂದ್ರ, ನನ್ನ ಹಾಗೂ ಪೂಜ್ಯ ತಂದೆಯವರ ಬಗ್ಗೆ ಯತ್ನಾಳ ಅವರು ಒಂದು ವರ್ಷದಿಂದ ಅಪಮಾನ ಮಾಡಿದ್ದಾರೆ. ಅದನ್ನು ಸಹಿಸಿಕೊಂಡು ಬಂದಿದ್ದೇನೆ ಎಂದು ವಿಜಯೇಂದ್ರ ತಿಳಿಸಿದ್ದಾರೆ.
ಯತ್ನಾಳರ ಉಚ್ಚಾಟನೆ ಹಿಂದೆ ನಮ್ಮ ಪಾತ್ರ ಇಲ್ಲ ಎಂದು ಸ್ಪಷ್ಟಪಡಿಸಿರುವ ವಿಜಯೇಂದ್ರ ಅವರು, ಯತ್ನಾಳರ ಬಗ್ಗೆ ಪಕ್ಷದ ಮುಖಂಡರ ಎದುರು ಯಾವದನ್ನು ದೂರು ನೀಡಿಲ್ಲ ಎಂದಿದ್ದಾರೆ. ಇದೊಂದು ವಿಧಿಯಾಟ ಎಂದು ವಿಜಯೇಂದ್ರ ತಿಳಿಸಿದ್ದಾರೆ.
