ಗುಜರಾತನ ಬನಸ್ಕಾಂತದ ದಿಸಾ ರಸ್ತೆಯಲ್ಲಿರುವ ಪಟಾಕಿ ಕಾರ್ಖಾನೆಯಲ್ಲಿ ಭೀಕರ ಬೆಂಕಿ ಕಾಣಿಸಿಕೊಂಡಿದೆ.
ಘಟನೆಯ ಮಾಹಿತಿ ತಿಳಿದ ತಕ್ಷಣ ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ಧಾವಿಸಿದ್ದಾರೆ. ಇಲ್ಲಿಯವರೆಗೆ 17 ಕಾರ್ಮಿಕರು ಸಾವನ್ನಪ್ಪಿದ್ದಾರೆ.
ಬೆಂಕಿ ಇನ್ನು ನಿಯಂತ್ರಣಕ್ಕೆ ಬರದೇ ಇರೋ ಕಾರಣ, ಸಾವಿನ ಸಂಖ್ಯೆ ಹೆಚ್ಚಾಗಬಹುದು ಎಂದು ಹೇಳಲಾಗಿದೆ.
ಮಾಹಿತಿ ಪ್ರಕಾರ, ದಿಸಾದ ಧುನ್ವಾ ರಸ್ತೆಯಲ್ಲಿರುವ ಪಟಾಕಿ ಕಾರ್ಖಾನೆಯಲ್ಲಿ ಮುಂಜಾನೆ ಭಾರಿ ಬೆಂಕಿ ಕಾಣಿಸಿಕೊಂಡಿದೆ.
ಬೆಂಕಿ ನಂದಿಸಲು ಅಗ್ನಿಶಾಮಕ ದಳದ ಸಿಬ್ಬಂದಿ ಹರಸಾಹಸ ಪಡುತ್ತಿದ್ದಾರೆ.
ಬೆಂಕಿ ಇಡೀ ಕಾರ್ಖಾನೆಗೆ ವ್ಯಾಪಿಸಿದೆ. ಸ್ಫೋಟವು ಎಷ್ಟು ಭಯಾನಕವಾಗಿದೆ ಎಂದರೆ ಕಾರ್ಮಿಕರ ದೇಹದ ಭಾಗಗಳು ದೂರದವರೆಗೆ ಎಸೆಯಲ್ಪಟ್ಟವು. ಸ್ಫೋಟದ ರಭಸಕ್ಕೆ ಗೋಡೌನ್ ಕೂಡ ಕುಸಿದಿದೆ.
